ನಾಲ್ಕು ಗೋಡೆಗಳ ಮದ್ಯ ಇರುವ ವಿದ್ಯೆಯಿಂದ ಒಂದು ಬಾರಿ ಹೊರಬಂದು ಸಡಗರ ಮತ್ತು ಉತ್ಸಾಹದ ಮೂಲಕ ಸ್ಫೂರ್ತಿ ಮತ್ತು ಪ್ರೇರಣೆ ತುಂಬುವ ಮಹತ್ತರ ಕಾರ್ಯಕ್ರಮವೇ ಶೈಕ್ಷಣಿಕ ಪ್ರವಾಸ.
ಕಲಿಕೆಯ ಒಂದು ಭಾಗವಾದ ಶೈಕ್ಷಣಿಕ ಪ್ರವಾಸವು ವೀಕ್ಷಣೆಯ ಮೂಲಕ ಅನುಭವ ಜನ್ಯ ಕಲಿಕೆಯಾಗಿದೆ ವಿದ್ಯಾರ್ಜನೆ ಮತ್ತು ಮಹಾನ್ ವ್ಯಕ್ತಿಗಳ ಮಕ್ಬರ ಸಂದರ್ಶನ ದುವಾಃ ಇದರೊಂದಿಗೆ ಸೇರಿಕೊಂಡಿದೆ.
ತಾತ್ವಿಕ ಜ್ಞಾನವನ್ನು ಒರೆಗೆ ಹಚ್ಚಿ ವೀಕ್ಷಿಸುವ ಮತ್ತು ಸಾದೃಶ್ಯಗಳೊಂದಿಗೆ ಹೋಲಿಕೆ ಮಾಡಿ ಕಲಿಯುವ ಚಟುವಟಿಕೆಯಾಗಿದೆ. ಶೈಕ್ಷಣಿಕ ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಅಧ್ಯಯನಕ್ಕೆ ಪ್ರಮುಖವಾಗಿದೆ.
ವೈವಿಧ್ಯಮಯ ಜನಸಮುದಾಯ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯ, ಪಾರಂಪರಿಕ ವೃತ್ತಿಗಳ ಪರಿಚಯ, ವಿವಿಧ ಪ್ರಾಣಿ ಪಕ್ಷಿ ಖಗಮೃಗಗಳ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗಿರುವ ವಾತವರಣದಲ್ಲಿ ನೋಡುವ ಒಂದು ಅವಕಾಶ.
ಇವುಗಳ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಶೈಕ್ಷಣಿಕ ಪ್ರವಾಸ ಹೆಚ್ಚು ಮಹತ್ತರವಾಗಿದೆ. ಶೈಕ್ಷಣಿಕ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಹಂಚಿ ತಿನ್ನುವ ಮನೋಭಾವ, ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರರಿಗೆ ಗೌರವ ನೀಡುವುದು, ವಿವಿಧ ಸಂಸ್ಕೃತಿಗಳ ಮೆಚ್ಚುಗೆ ಹೀಗೆ ಹಲವು ಬಗೆಯ ಸೌಜನ್ಯಯುತ ನಡವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.
ಪಠ್ಯದಲ್ಲಿನ ಪರಿಕಲ್ಪನೆಗಳನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ತಿಳಿದಾಗ ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಶೈಕ್ಷಣೀಕ ಪ್ರವಾಸಕ್ಕೆ ತನ್ನದೇ ಆದ ಮಹತ್ವವಿದೆ.
ಇದೇ ರೀತಿ ಸುಬುಲು ಸ್ಸಲಾಂ ಮದ್ರಸ ಕೊಯನಾಡು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸವನ್ನು ವಯನಾಡ್, ಮಡವೂರ್, ನಾಲೇಜ್ ಸಿಟಿ, ಮರ್ಕಝ್, ಕೊಝಿಕ್ಕೋಡ್, ಇನ್ನಿತರ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಈ ಒಂದು ಯೋಜನೆಗೆ ನೇತೃತ್ವ ವಹಿಸಿರುವುದು ಸುನ್ನಿ ಮುಸ್ಲಿಂ ಜುಮಾ ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ, ಸದರ್ ಮುಅಲ್ಲಿಂ ನೌಶದ್ ಫಾಳಿಲಿ, ದೇವರಕೊಲ್ಲಿ ಉಪಸ್ಥಿತರಿದ್ದರು.
🛑ವಿಧ್ಯಾರ್ಥಿಗಳು ಮತ್ತು ಪೋಷಕರು ನೋಡಲೇ ಬೇಕಾದ ವೀಡಿಯೋ👇
🛑ವಿಧ್ಯಾರ್ಥಿಗಳು ಮತ್ತು ಪೋಷಕರು ಅಳವಡಿಸಿಕೊಳ್ಳಲೇ ಬೇಕಾದ ಮಹತ್ವಪೂರ್ಣ ಟಿಪ್ಸ್👇
🛑ಅಂತರಾಷ್ಟ್ರೀಯ ತರಬೇತುದಾರ ಸಿನಾನ್ ಝಕರಿಯಾ ರವರು ಮಾತನಾಡಿದ್ದಾರೆ👇
🥳KA 21 SULYA WHATSAPP GROUP🥳👇





m
