Featured, ಸ್ಥಳೀಯ

ಕ್ರೈಸ್ತ ಸಮುದಾಯದ ವ್ಯಕ್ತಿಯ ಮರಣ; ನಗರ ಪಂಚಾಯತ್ ರುದ್ರಭೂಮಿಯಲ್ಲಿ ಧಫನ- ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲ್ಲೂಕು ವತಿಯಿಂದ ಧಫನ ಕಾರ್ಯ;

ಸುಳ್ಯ : ಕಡಬ ಆಲಂಕಾರು ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಮಲಗಿದಲ್ಲಿಯೇ ಮರಣಹೊಂದಿದ್ದು ವಾರಿಸುದಾರರು ಪತ್ತೆಯಾಗದ ಕಾರಣ ಕಡಬ ಪೊಲೀಸ್ ಠಾಣೆಯಲ್ಲಿ ಅಬೂಬುಕ್ಕರ್ ಎಂಬವರು ನೀಡಿದ ದೂರಿನಂತೆ ಯು ಡಿ. ಆರ್ ನಂಬ್ರ: 01-2025 ಕಲಂ: 194(3), (iv) ಬಿ ಎನ್ ಎಸ್ ಎಸ್ ರಂತೆ ಪ್ರಕರಣ ದಾಖಲಾಗಿತ್ತು.

                       ಮೃತ ವ್ಯಕ್ತಿ ತಂಗಚ್ಚನ್ (70ವ)

ಮೃತ ವ್ಯಕ್ತಿ ತಂಗಚ್ಚನ್ ಎಂದು ಹೆಸರು ಹೇಳುತ್ತಿದ್ದು ಆತನ ವಿಳಾಸ ತಿಳಿದು ಬಂದಿರುವುದಿಲ್ಲ ಗುರುತು ಪತ್ತೆಗೆ ಪೊಲೀಸರು ಪ್ರಕಟಣೆ ಹೊರಡಿಸಿದ ನಂತರ. ಮೃತ ವ್ಯಕ್ತಿಯ ಕುಟುಂಬಸ್ಥರು ಸಂಪರ್ಕಕ್ಕೆ ಬಂದಿದ್ದರೂ ಕೇರಳ ಮೂಲದ ತಂಗಚ್ಚನ್ (70ವ) ಎಂಬ ಹೆಸರಿನ ವ್ಯಕ್ತಿಯು ಕ್ರಿಶ್ಚಿಯನ್ ಸಮುದಾಯಕ್ಕೆ ಸೆರಿದ್ದವರಾಗಿದ್ದು. ಸುಮಾರು ವರ್ಷ ಕುಟುಂಬದವರ ಸಂಪರ್ಕದಲ್ಲಿ ಇರದ ಕಾರಣ ಇವರ ಹೆಸರು ಯಾವುದೇ ಚಚ್೯ನಲ್ಲಿ ನೋಂದಣಿ ಇಲ್ಲದಿರುವುದರಿಂದ. ಅವರ ಊರಿನಲ್ಲೂ ಹಾಗೂ ಚಚ್೯ನ ಸಂಪ್ರದಾಯದಂತೆ ಚಚ್೯ ಧಪನ ಭೂಮಿಯಲ್ಲೂ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗಲಿಲ್ಲ.

ಕೊನೆಗೆ ಅವರ ಸಂಬಂಧಿಕರು ಕಡಬ ಪೆರಾಬೆಯ ಸಾಮಾಜಿಕ ಕಾರ್ಯಕರ್ತ ಗ್ರಾಮ ಪಂಚಾಯತ್ ಸದಸ್ಯ ಫಯಾಝ್ ಪೆರಾಬೆ, ಆಬ್ಬು ಅಲಂಗಾರು,ಇವರಲ್ಲಿ ಸಮಸ್ಯೆ ಹೇಳಿಕೊಂಡಾಗ ಅವರು ಕೂಡಲೇ ಸುಳ್ಯದ ನಗರ ಪಂಚಾಯತ್ ಸದಸ್ಯ , ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಇದರ ಸದಸ್ಯ ರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ ಇವರಿಗೆ ಕರೆಮಾಡಿ ಘಟನೆ ವಿವರಿಸಿ ವಿನಂತಿಸಿಕೊಂಡಾಗ ಇಬ್ಬರು ಸದಸ್ಯರು ಕೂಡಲೇ ಸ್ಪಂದಿಸಿ ಕಾರ್ಯಪ್ರವೃತ್ತರಾದರು.

ಕಡಬ ಪೊಲೀಸ್ ಉಪನಿರೀಕ್ಷಕ ಅಭಿನಂದನ್ ಇವರ ಮಾರ್ಗದರ್ಶನದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ತಂಗಚ್ಚನ್ ಇವರ ಮೃತದೇಹವನ್ನು ತಂದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸುಳ್ಯ ನಗರ ಪಂಚಾಯತ್ ಸಹಕಾರದಿಂದ ಕೆರ್ಪಳ ಸ್ಮಶಾನದಲ್ಲಿ ತಂಗಚ್ಚನ್ ರವರ ಪಾರ್ಥಿವ ಶರೀರವನ್ನು ಧಫನ ಮಾಡಲಾಯಿತು. ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಇದರ ಸದಸ್ಯರು ಗೈದ ಮಾನವಿಯ ಕಾರುಣ್ಯ ಸೇವೆಗೆ ಜನರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆಯ ಎ ಎಸೈ ಕರುಣಾಕರ, ಸುಳ್ಯ ನಗರ ಪಂಚಾಯತ್ ಸದಸ್ಯರು, ಮುಸ್ಲಿಮ್ ಯೂತ್ ಫೆಡರೇಶನ್ ಇದರ ಸದಸ್ಯರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಪೆರಾಬೆ ಪಂಚಾಯತ್ ಸದಸ್ಯ ಫಯಾಝ್, ಸಾಮಾಜಿಕ ಕಾರ್ಯಕರ್ತ ಆಬ್ಬು ಅಲಂಗಾರು, ಸ್ಮಶಾನ ಉಸ್ತುವಾರಿ ಬಿಜಿಲಾ, ಮೃತ ತಂಗಚ್ಚನ್ ಕುಟುಂಬದವರಾದ ರಾಜು, ಅಭಿ, ಮುಸ್ಲಿಮ್ ಯೂತ್ ಫೆಡರೇಶನ್ ಸದಸ್ಯರಾದ ರಶೀದ್ ಜಟ್ಟಿಪಳ್ಳ , ಉನೈಸ್ ಪೆರಾಜೆ, ಕಲಂದರ್ ಎಲಿಮಲೆ, ಕೂಲಿ ಕಾರ್ಮಿಕ ರಾದ ಸಂತೋಷ್, ವಿನೋದ್, ಮಕ್ತುಮ್,ಸುರೇಶ್ ಉಪಸ್ಥಿತರಿದ್ದರು. ಮೃತದೇಹವನ್ನು ಸಾಗಿಸಲು SSF ಸುಳ್ಯ ಇವರ ಆಂಬುಲೆನ್ಸ್ ನೊಂದಿಗೆ ಸಿದ್ದೀಕ್ ಗೂನಡ್ಕ ಸಹಕರಿಸಿದರು.

m

Related Posts