ಸುಳ್ಯ : ಮೊಗರ್ಪಣೆ ಚರಿತ್ರೆ ಪ್ರಸಿದ್ದ ಹಝರತ್ ವಲಿಯುಲ್ಲಾಯಿ ಮಾಂಬಿಳಿ ತಂಜಳ್(ನ.ಮ) ಹೆಸರಿನಲ್ಲಿ ಎರಡು ವರ್ಷಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಜನವರಿ 12 ರಂದು ಚಾಲನೆ ನೀಡಲಾಯಿತು.

ಜನವರಿ 12 ರಿಂದ 14 ರ ಮೂರು ದಿನಗಳ ತನಕ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ನಿನ್ನೆ ನಡೆದ ಉದ್ಘಾಟನೆ ಸಮಾರಂಭ ದ ಕಾರ್ಯಕ್ರಮದಲ್ಲಿ ಇವಾರ್ತೆ ವೆಬ್ ನ್ಯೂಸ್ ಬಳಗ ಮೊಗರ್ಪಣೆ ಉರೂಸ್ ಅಂಗವಾಗಿ ಹೊರತಂದ ವಿಶೇಷ ಸಂಚಿಕೆಯನ್ನು ಹೊರತರಲಾಯಿತು.

ಈ ಸಂದರ್ಭದಲ್ಲಿ ಮೊಗರ್ಪಣೆ ಮಸೀದಿ ಜಮಾಹತ್ ಅಧ್ಯಕ್ಷರಾದ ಜಿ ಇಬ್ರಾಹಿಂ, ಖ್ಯಾತ ನಾಥ್ ಆಲಾಪನೆ ಗಾರ ನಬೀಲ್ ಬರಖಾತಿ ಬೆಂಗಳೂರು, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಶೀತಲ್, ಮೊಗರ್ಪಣೆ ಮಸೀದಿ ಖತೀಬ್ ರಾದ ಹಾಫೀಝ್ ಶೌಕತ್ತಲಿ ಸಖಾಫಿ, ಎಸ್ ಸಂಶುದ್ದೀನ್, ಉದ್ಯಮಿ ಅಬ್ಬುಲ್ ರಹಿಮಾನ್ ಸಂಕೇಶ್ ಇಸ್ಮಾಯಿಲ್ ಸೊಣಂಗೇರಿ, ಇವಾರ್ತೆ ಪ್ರತಿನಿಧಿ ಕಲಂದರ್ ಶಾಫಿ ಅಡ್ಕ, ಇವಾರ್ತೆ ವರದಿಗಾರ ರುನೈಸ್ ಕೊಯನಾಡು ಉಪಸ್ಥಿತರಿದ್ದರು.





m

