ಸುಳ್ಯ : ಕಳೆದ ವಾರ ಸುಳ್ಯ ಖಾಸಗಿ ರಿಕ್ಷಾ ಸ್ಟಾಂಡ್ ಬಳಿಯಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅನಾಥ ವೃದ್ಧೆ ಚಂದ್ರಮ ಎನ್ನುವರನ್ನು ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ರವರು ಗಮನಿಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಮತ್ತೆ ಎರಡು ದಿನಗಳ ನಂತರ ಚಂದ್ರಮ್ಮ ಇವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಸರಕಾರಿ ಆಸ್ಪತ್ರೆಯ ಬಳಿ ಇರುವ ರಿಕ್ಷಾ ಸ್ಟಾಂಡ್ ಬಳಿ ಆಶ್ರಯ ಪಡೆದಿದ್ದರು. ಇದನ್ನು ಅರಿತ ಕೆ ಎಸ್ ಉಮ್ಮರ್ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಅನಾಥರು ಮತ್ತು ಆಶ್ರಯ ವಂಚಿತರಿಗೆ ದೀರ್ಘಕಾಲದ ಚಿಕಿತ್ಸೆ ಕೊಡಿಸಲು ಸಾಧ್ಯವಾಗುದಿಲ್ಲ. ಇದಕ್ಕೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾಡ್೯ ಇದೆ ಅಲ್ಲಿಗೆ ಕಳುಹಿಸಿ ಕೊಡಬಹುದು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಕೂಡಲೇ ಕೆ ಎಸ್ ಉಮ್ಮರ್ ಇವರು ಆ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನಾಥ ವೃದ್ಧೆ ಚಂದ್ರಮಳನ್ನು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಇವರ ಸಲಹೆ ಮತ್ತು ಸಹಾಯ ಪಡೆದು ನಗರ ಪಂಚಾಯತ್ ನ ಪೌರ ಕಾರ್ಮಿಕರ ಹಾಗೂ ಮುಸ್ಲಿಮ್ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಸದಸ್ಯರ ಸಹಕಾರದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವಿಶೇಷ ವಾಡ್೯ಗೆ ದಾಖಲಿಸಲಾಗಿತ್ತು. ಈ ಕಾರ್ಯದಲ್ಲಿ ಉಮ್ಮರ್ ಕೆ ಎಸ್ ಇವರಿಗೆ ಮುಸ್ಲಿಂ ಯೂತ್ ಫ್ರೆಂಡ್ಸ್ ನ ಸದಸ್ಯರಾದ ಶರೀಫ್ ಕಂಠಿ, ಇಕ್ಬಾಲ್ ಸುಣ್ಣ ಮೂಲೆ, ರಶೀದ್ ಜಟ್ಟಿಪಳ್ಳ ಸಾಥ್ ನೀಡಿದರು
ವೃದ್ಧೆ ಚಂದ್ರಮ್ಮ ಇವರನ್ನು ಸುಳ್ಯ ನಗರ ಪಂಚಾಯತ್ ನ ಮಹಿಳಾ ಪೌರ ಕಾರ್ಮಿಕರು ನಗರ ಪಂಚಾಯತ್ ನ ಸ್ನಾನ ಗೃಹಕ್ಕೆ ಕರೆದುಕೊಂಡು ಹೋಗಿ ಬಿಸಿ ನೀರು ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ಗಳನ್ನು ತೊಡಿಸಿದ್ದರು ಎರಡು ಜೊತೆ ಹೊಸ ಉಡುಪನ್ನು ಉಮ್ಮರ್ ಖರಿದಿಸಿ ಕೊಟ್ಟರು.





m

