ಪುತ್ತೂರು : ವಕ್ಫ್ ನಿಯಮ ಉಲ್ಲಂಘಿಸಿ ನೂತನವಾಗಿ ರಚಿಸಿದ ಸಂಟ್ಯಾರ್ ಮಸೀದಿ ಕಮಿಟಿಯನ್ನು ಬರ್ಖಾಸ್ತುಗೊಳಿಸುವಂತೆ ವಕ್ಫ್ ಮಂಡಳಿಯಿಂದ ನೋಟೀಸು ಜಾರಿಗೊಳಿಸಲಾಗಿದೆ.
ಮಹಾಸಭೆ ನಡೆಸುವ ಬಗ್ಗೆ ಜಿಲ್ಲಾ ವಕ್ಫ್ ಕಛೇರಿಗೆ ಮಾಹಿತಿ ನೀಡದೆ ವಕ್ಫ್ ನಿಯಮಾವಳಿಯಲ್ಲಿ ಇಲ್ಲದ ಗೌರವಾಧ್ಯಕ್ಷರ ನೇತೃತ್ವದಲ್ಲಿ, ಒಮ್ಮತವಿಲ್ಲದ ಸಮಿತಿಯನ್ನು ರಚಿಸಿದ್ದು ಹಾಗೂ ಉಪವಾಸ ನಿಮಿತ್ತ 03 ತಿಂಗಳ ಕಾಲ ಹಿಂದಿನ ಕಮಿಟಿ ಮುಂದುವರೆಸುವಂತೆ ಆದೇಶಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಆದ್ದರಿಂದ ಈ ನೂತನ ಸಮಿತಿಯು ಕಾನೂನುಬಾಹಿರವಾಗಿದೆಯೆಂದು ನೋಟೀಸಿನಲ್ಲಿ ಉಲ್ಲೇಖಿಸಿದೆ. ಈ ಬಗ್ಗೆ ಸ್ಪಷ್ಠೀಕರಣ ನೀಡಲು ಮಸೀದಿ ಕಮಿಟಿಗೆ ಆದೇಶಿಸಲಾಗಿದೆ.




m
