Featured, ಅಂಕಣ, ಸ್ಥಳೀಯ

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು 28 ನೇ ಸ್ವಲಾತ್ ವಾರ್ಷಿಕ ಮತ್ತು ಏಕ ದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಇದರ 28 ನೇ ಸ್ವಲಾತ್ ವಾರ್ಷಿಕವು ಏಪ್ರಿಲ್ 12 ಶನಿವಾರ ದಂದು ಸುಬುಲು ಸ್ಸಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ ಕಾರ್ಯಕ್ರಮದ ದುಆ ನೇತೃತ್ವವನ್ನು ಸಯ್ಯದ್ ಸೀದೀ ಕೋಯ ಅಲ್ ಅಹ್ಸನಿ ತಂಙಳ್ ವಹಿಸಲಿದ್ದಾರೆ, ಉದ್ಘಾಟನೆಯನ್ನು ಮಹಮ್ಮದ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಲಿದ್ದಾರೆ, ಮುಖ್ಯ ಪ್ರಭಾಷಣ ಖ್ಯಾತ ವಾಗ್ಮಿ ಹಾಫೀಲ್ ಮಾಹಿನ್ ಮನ್ನಾನಿ ಮಾಡಲಿದ್ದಾರೆ, ನೌಶಾದ್ ಫಾಳಿಲಿ ಸರ್ವರನ್ನು ಸ್ವಾಗತಿಸಿಸಲಿದ್ದಾರೆ, ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಮಾರ್ಚ್ 14(ಇಂದು) ಶುಕ್ರವಾರ ಜುಮಾ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞಿ ಬಿಡುಗಡೆ ಗೊಳಿಸಿದರು, ಪ್ರಸ್ತುತ ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಮಹಮ್ಮದ್ ಸಖಾಫಿ, ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎಸ್ ಪಿ, ಮಾಜಿ ಅಧ್ಯಕ್ಷರಾದ ಹಾಜಿ ಅಲವಿ ಕುಟ್ಟಿ, ಅಬ್ದುಲ್ ರಝಾಕ್ ಎಸ್ ಎ, ಪ್ರಧಾನ ಕಾರ್ಯದರ್ಶಿ ಮುನೀರ್ ಪಿ ಎಂ, ಉಪಾಧ್ಯಕ್ಷ ಉಸ್ಮಾನ್ ಎಂ ಹೆಚ್, ಸದಸ್ಯರಾದ ಅಬ್ದುಲ್ಲಾ, ಹಂಸ, ಮುಸ್ತಾಫಾ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

m

Related Posts