Featured, ಇತರೆ, ಸ್ಥಳೀಯ

ಸುಳ್ಯ–ಕೊಯನಾಡು ಬಸ್ ಸಮಸ್ಯೆಗಳನ್ನು ಸರಿಪಡಿಸುವಂತೆ ಮೇಲ್ಮನೆ ಶಾಸಕರಿಗೆ ಮನವಿ

ಸುಳ್ಯ : ದ.ಕ.ಜಿಲ್ಲೆಯ ಸುಳ್ಯ ತಾಲೂಕಿನಿಂದ ಕೊಡಗಿನ ಕೊಯನಾಡು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸುಳ್ಯ–ಕೊಯನಾಡು ಗ್ರಾಮಾಂತರ ಸಾರಿಗೆ ಬಸ್ ಗಳ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದ್ದು, ಈ ಭಾಗದಲ್ಲಿರುವ ಏಕೈಕ ಸಾರಿಗೆ ವ್ಯವಸ್ಥೆ ಇದಾಗಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಬಹುತೇಕರು ಇದೇ ಬಸ್ ಅನ್ನು ಅವಲಂಬಿಸಿದ್ದಾರೆ. ಕೆಲವು ಭಾಗದಲ್ಲಿ ಚಾಲಕರು ಬಸ್ ನಿಲುಗಡೆಯನ್ನು ಮಾಡದೇ ಪ್ರಯಾಣಿಕರನ್ನು ಕಡೆಗಣಿಸಲಾಗುತ್ತಿರುವುದರಿಂದ ಪುತ್ತೂರು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈ ಸಮಸ್ಯೆಗಳನ್ನು ಸರಿಪಡಿಸಲು ಸೂಚಿಸುವಂತೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ’ಸೋಜರವರಿಗೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮನವಿಯನ್ನು ಮಾಡಲಾಯಿತು.

m