Featured, ಅಂಕಣ, ಸ್ಥಳೀಯ

MOKS ಇದರ ನೂತನ ಪದಾಧಿಕಾರಿಗಳ ಆಯ್ಕೆ:

ಕಾಸರಗೋಡು ಎ22: ವಿದ್ಯಾರ್ಥಿಗಳ ಅಭಯ ಕೇಂದ್ರವೂ ತಿಳುವಳಿಕೆಯ ಸಾರ್ವಭೌಮತೆಯ ಸುಂದರ ಮಕೂಟವೂ ಆದ ಜಾಮಿಅಃ ಸಅದಿಯ್ಯ ಅರಬಿಯ್ಯ ಎಂಬ ವಿಧ್ಯಾ ಕೇಂದ್ರವು ಹಲವಾರು ಭಾಷೆ ಸಂಸ್ಕೃತಿಯುಳ್ಳ ವಿದ್ಯಾರ್ಥಿಗಳ ಜ್ಞಾನಕೇಂದ್ರವಾಗಿದೆ. ಧಾರ್ಮಿಕ ತಿಳುವಳಿಕೆಯನ್ನು ಬಯಸುತ್ತಾ ನೆರೆಯ ರಾಜ್ಯ ಕರ್ನಾಟಕದಿಂದ ಬಂದ ಯುವ ಪಂಡಿತರ ಏಳಿಗೆಗಾಗಿ ಕರ್ನಾಟಕ ವಿದ್ಯಾರ್ಥಿಗಳಿಂದ ರೂಪಿತವಾದ ವಿದ್ಯಾರ್ಥಿ ಸಂಘಟನೆಯಾಗಿದೆ MOKS (ಮಿಸ್ಬಾಹುಸ್ಸುಆದಃ ಓರ್ಗನೇಷನ್ ಕರ್ನಾಟಕ ಸ್ಟುಡೆಂಟ್)

       ಇದರ 2025-26 ನೇ ಸಾಲಿನ ವಿದ್ಯಾರ್ಥಿ ಸಂಘಟನೆಯ ನೂತನ ಪದಾಧಿಕಾರಿಗಳ ಘೋಷಣೆಯು ಸಯ್ಯದ್ ಇಸ್ಮಾಈಲ್ ಅಲ್ ಹಾದಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಸಅದಿಯ್ಯಾ ಶರೀಅತ್ ಕಾಲೇಜ್ ಮುದರ್ರಿಸ್ ಶೈಖುನಾ ಕೆ.ಕೆ ಹುಸೈನ್ ಬಾಖವಿ ಉಸ್ತಾದರ ಅದ್ಯಕ್ಷತೆಯೊಂದಿಗೆ ಹಾಗೂ ಬಹು. ಕುಟ್ಟಶ್ಶೇರಿ ಉಸ್ತಾದರ ಉದ್ಘಾಟನೆಯ ಮಾತುಗಳಿಂದ ಆರಂಬಗೊಂಡು.ಕೆ.ಸಿ ರೋಡ್ ಹುಸೈಸ್ ಸಅದಿ ಉಸ್ತಾದರು ನೂತನ ಪದಾಧಿಕಾರಿಗಳನ್ನ ಪ್ರಕಟನೆ ಮಾಡಿ ಕ್ಯಾಂಪಸಲ್ಲಿ ಪಾಲಿಸಬೇಕಾದ ನೀತಿ ನಿಯಮಾವಳಿಗಳ ಕುರಿತು ಮಾತನಾಡಿದರು. ಹಾಗುವೇದಿಕೆಯಲ್ಲಿ ಲತೀಫ್ ಸಅದಿ ಉಸ್ತಾದ್,ಅಚ್ಚೂರು ಉಸ್ತಾದ್, ಚಿಯ್ಯೂರ್ ಉಸ್ತಾದ್, ಭಾಖವಿ ಉಸ್ತಾದ್, ಸೈಫುದ್ದೀನ್ ಸಅದಿ ಉಸ್ತಾದ್, ಅಝೀಝ್ ಸಅದಿ ಉಸ್ತಾದ್ ಭಾಗಿಯಾಗಿದ್ದರು.

        ವಿದ್ಯಾರ್ಥಿಗಳ ಕಲಿಕಾ ಬೆಳವಣಿಗೆ ಹಾಗು ಕಲಾ ಔನತ್ಯಕ್ಕಾಗಿ ಕಾರ್ಯಾಚರಿಸುವ MOKS, ಇದರ ನೂತನ ಅಧ್ಯಕ್ಷರನ್ನಾಗಿ ಮುಹಮ್ಮದ್ ಉನೈಸ್ ಪಾನೇಲ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಫ್ನಾಝ್ ಬೇಂಗಿಲ, ಹಣಕಾಸು ಕಾರ್ಯದರ್ಶಿಯಾಗಿ ಸ್ವಾದಿಕ್ ಕುಶಾಲನಗರ, ಉಪಾಧ್ಯಕ್ಷರನ್ನಾಗಿ ಸಯ್ಯದ್ ಶಮ್ಮಾಸ್, ಶಿಹಾಬುದ್ದೀನ್, ಅನಸ್ ಮಾಣಿ, ಜೊತೆ ಕಾರ್ಯದರ್ಶಿಯನ್ನಾಗಿ ಶಾಫಿ ಬಾಕಿಮಾರ್, ಸುಹೈಲ್ ಖಾನ್ ಪಾಂಡವರ ಕಲ್ಲು, ತ್ವಲ್ಹತ್ ನಾವೂರು, ಶರೀಫ್ ಎಮ್ಮೆಮಾಡು ಎಂಬವರನ್ನು ಆಯ್ಕೆ ಮಾಡಲಾಯಿತು.

m