Featured, ಅಂಕಣ, ಸ್ಥಳೀಯ

ಕೆವಿಜಿ ಆಯುರ್ವೇದ ಮೆಡಿಕಲ್‌ ಕಾಲೇಜ್‌ನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸ್ವಸ್ಥವೃತ್ತ ವಿಭಾಗ, ಎನ್‌ಎಸ್‌ಎಸ್ ಘಟಕ ಹಾಗೂ ಮಂಗಳೂರು ಆಯುಷ್ ಇಲಾಖೆಯ ಸಹಯೋಗದೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತ್ ಎಂ, ಕೆವಿಜಿ ಆಯುರ್ವೇದ ಫಾರ್ಮ್ ಮತ್ತು ರಿಸರ್ಚ್ ಸೆಂಟರ್‌ನ ಸಿಇಒ ಡಾ. ಪುರುಷೋತ್ತಮ ಕೆ.ಜಿ., ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕಿ ಡಾ. ಕವಿತಾ ಬಿ.ಎಂ., ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಡಿ.ಜಿ., ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರು ಡಾ. ಶಬೀನಾ ಟಿ.ಟಿ., ಡಾ. ಕೃತಿ ಅಮೈ, ಡಾ. ಐಶ್ವರ್ಯ ಬಾಲಗೋಪಾಲ್ ಉಪಸ್ಥಿತರಿದ್ದರು.

ಯೋಗ ದಿನಾಚರಣೆಯ ಅಂಗವಾಗಿ, ಕಾಲೇಜು ಆವರಣದ ತೆರೆದ ಮೈದಾನದಲ್ಲಿ ವಿದ್ಯಾರ್ಥಿಗಳು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ. ಅವರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಸಲಾಯಿತು. ಈ ಪ್ರಾತ್ಯಕ್ಷಿಕೆಯನ್ನು ಡಾ. ಶಬೀನಾ ಟಿ.ಟಿ., ಡಾ. ಕೃತಿ ಅಮೈ ಮತ್ತು ಡಾ. ಐಶ್ವರ್ಯ ಬಾಲಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಈ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಸ್ಪರ್ಧೆಗಳ ಫಲಿತಾಂಶ ಹೀಗಿದೆ:

ಯೋಗ ಫೋಟೋಗ್ರಫಿ ಸ್ಪರ್ಧೆ:

ಪ್ರಥಮ ಬಹುಮಾನ: ಶ್ರೇಯಾ ಎಂ.ಜಿ. (ನೆಹರು ಮೆಮೋರಿಯಲ್ ಪಿಯು ಕಾಲೇಜು, ದ್ವಿತೀಯ ವಾಣಿಜ್ಯ ವಿಭಾಗ)

ದ್ವಿತೀಯ ಬಹುಮಾನ: ಯತೀಶ್ ಗೌಡ ಎಚ್.ಆರ್. (ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ದ್ವಿತೀಯ ಬಿ.ಎ.ಎಂ.ಎಸ್)

ಇ–ಪೋಸ್ಟರ್ ಸ್ಪರ್ಧೆ:

ಪ್ರಥಮ ಬಹುಮಾನ: ಗದಗಯ್ಯ ಈರಣ್ಣ ಹಿರೇಮಠ ದ್ವಿತೀಯ ಬಹುಮಾನ: ಮೆಹ್ವೀಶ್ ತೃತ್ತೀಯ ಬಹುಮಾನ: ಚಿತ್ರ ಕೆ.ಎಚ್.

ಪೋಸ್ಟರ್ ಮೇಕಿಂಗ್ ಸ್ಪರ್ಧೆ:

ಪ್ರಥಮ ಬಹುಮಾನ: ಐಶ್ವರ್ಯ ಸುಭಾಷ್ ರಾಯ್ಕಾರ್ ಮತ್ತು ಬಳಗ ದ್ವಿತೀಯ ಬಹುಮಾನ: ಶಾಂಭವಿ ಮತ್ತು ಬಳಗ

ಪ್ರಬಂಧ ಸ್ಪರ್ಧೆ:

ಪ್ರಥಮ ಬಹುಮಾನ: ಚಿಂತನ ಎನ್.ಎಸ್.ದ್ವಿತೀಯ ಬಹುಮಾನ: ದೀಪ್ತಿ ಧರ್ಮರಾಜ್ ತೃತೀಯ ಬಹುಮಾನ: ಐಶ್ವರ್ಯ ಸುಭಾಷ್ ರಾಯ್ಕಾರ್

ಯೋಗಾಸನ ಸ್ಪರ್ಧೆ:

ಪ್ರಥಮ ಬಹುಮಾನ: ಬಿ.ಎಸ್. ಪ್ರಸನ್ನ ದ್ವಿತೀಯ ಬಹುಮಾನ: ರಾಹುಲ್ ರಾಜನ್ ತೃತೀಯ ಬಹುಮಾನ: ಗಾನವಿ ಎಂ. ಮತ್ತು ದರ್ಶನ್ ಎಚ್.ಎಸ್.

ಬಹುಮಾನ ವಿತರಣಾ ಕಾರ್ಯಕ್ರಮವನ್ನು ಡಾ. ಕೆ.ವಿ. ಚಿದಾನಂದ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ–ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವೈಶಾಲಿ ಪಿ.ಜೆ. ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ವಂಶಿಕಾ ಸ್ವಾಗತಿಸಿ, ವೈಷ್ಣವಿ ಎಚ್.ಡಿ. ವಂದನಾ ಸಲ್ಲಿಸಿದರು. ನಿರೂಪಣೆಯನ್ನು ರೋಹನ್ ಗೌಡ ಮತ್ತು ರಕ್ಷಿತಾ ಸಂಯೋಜಿಸಿದರು.

m