KSTRC ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕೆಗೆ ತೀವ್ರ ಅಸ್ವಸ್ಥ !: ಬಸ್ಸನ್ನೇ ಕೆವಿಜಿ ಆಸ್ಪತ್ರೆಗೆ ತಂದ ಚಾಲಕನ ಮಾನವೀಯ ಸ್ಪಂದನೆಗೆ ಬಾರಿ ಪ್ರಶಂಸೆ!!
ಸುಳ್ಯ: ಮಂಗಳೂರುದಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ತೀವ್ರ ಅಸ್ವಸ್ಥತೆ ಉಂಟಾದ ಘಟನೆ ಇಂದು ಬೆಳಕಿಗೆ ಬಂದಿದೆ. ಸಮಯೋಚಿತ ಸ್ಪಂದನೆ ನೀಡಿದ ಬಸ್ ಚಾಲಕ ಬಸ್ಸನ್ನೇ ತಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ಮೈಸೂರು ಮೂಲದ ಶೋಭಾ ಎಂಬ ಮಹಿಳೆಗೆ ಬಸ್ಸು ಸುಳ್ಯ ತಲುಪುವ ಹೊತ್ತಿಗೆ ತೀವ್ರ ವಾಂತಿ ಆಗುತ್ತಾ ಬಂದಿದ್ದು, ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿದ್ದರು ಕೂಡಲೇ ಸಹಪ್ರಯಾಣಿಕರು ಚಾಲಕನ ಗಮನಕ್ಕೆ ತಂದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕೂಡಲೇ ಸೀದಾ ಬಸ್ಸನ್ನೇ ಕೆವಿಜಿ ಆಸ್ಪತ್ರೆಗೆ ತಂದು ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ ಚಾಲಕನ ಸಮಯೋಜಿತ ಮಾನವೀಯ ಸ್ಪಂದನೆಗೆ ಸಾರ್ವಜನಿಕರಿಂದ ಬಾರಿ ಪ್ರಶಂಸೆ ವ್ಯಕವಾಗುತ್ತಿದೆ.




m

