ಚೇರ್ಮನ್ ಆಗಿ ಮುಹಮ್ಮದ್ ಸವಾದ್ ಮದನಿ ಮೇನಾಲ, ಕನ್ವೀನರ್ ಆಗಿ ಅಬ್ದುಲ್ ನಾಸಿರ್ ಪೈಂಬಚ್ಚಾಲ್, ಫೈನಾನ್ಸ್ ಮುಸ್ತಫಾ ಅದನಿ ಮಂಡೆಕ್ಕೋಲ್ ಆಯ್ಕೆ
ಅಜ್ಜಾವರ: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಅಜ್ಜಾವರ ಸೆಕ್ಟರ್ ವತಿಯಿಂದ ಆಯೋಜಿಸಲಾಗುತ್ತಿರುವ 14ನೇ ಆವೃತ್ತಿಯ “ಸಾಹಿತ್ಯೋತ್ಸವ” ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಪ್ರೋಗ್ರಾಂ ಸಮಿತಿಯನ್ನು ಅಧಿಕೃತವಾಗಿ ರಚಿಸಲಾಗಿದೆ.
ಸಮಿತಿಯ ಚೇರ್ಮನ್ ಆಗಿ ಮುಹಮ್ಮದ್ ಸವಾದ್ ಮದನಿ ಮೇನಾಲ ಅವರನ್ನು ಆಯ್ಕೆ ಮಾಡಲಾಗಿದ್ದು, ಕನ್ವೀನರ್ ಆಗಿ ಅಬ್ದುಲ್ ನಾಸಿರ್ ಪೈಂಬಚ್ಚಾಲ್ ನೇಮಕಗೊಂಡಿದ್ದಾರೆ. ಫೈನಾನ್ಸ್ ವಿಭಾಗದ ಹೊಣೆಗಾರಿಕೆಯನ್ನು ಮುಸ್ತಫಾ ಅದನಿ ಮಂಡೆಕ್ಕೋಲ್ ವಹಿಸಿಕೊಂಡಿದ್ದು, ಮೀಡಿಯಾ ಹಾಗೂ ಪ್ರಚಾರ ವಿಭಾಗದ ಜವಾಬ್ದಾರಿಯನ್ನು ಮುಖ್ತಾರ್ ಸಅದಿ ಮೇನಾಲ ಅವರಿಗೆ ನೀಡಲಾಗಿದೆ.
ಇದೇ ವೇಳೆ ಹಾಫಿಝ್ ಕಬೀರ್ ಹಿಮಾಮಿ ಕೊಯಂಗಿ, ತಾಜುದ್ದೀನ್ ಸಅದಿ ಅಡ್ಕ, ಜಾಫರ್ ಹಾಶಿಮಿ ಮಂಡೆಕ್ಕೋಲ್, ರುವೈಸ್ ಹಿಮಾಮಿ ಕೊಯಂಗಿ, ನೌಶಾದ್ ಅಡ್ಕಾರ್, ಮುಹಮ್ಮದ್ ಕುಂಞ್ಞಿ ಪೈಂಬಚ್ಚಾಲ್, ಸಫ್ವಾನ್ ಸುಣ್ಣಮೂಲೆ, ಅಬ್ಬಾಸ್ ಇರುವಂಬಳ್ಳ, ಸಾಬಿತ್ ಪೈಂಬಚ್ಚಾಲ್, ರಾಶಿದ್ ಇರುವಂಬಳ್ಳ, ಅಲಿ ಸುಣ್ಣಮೂಲೆ ಹಾಗೂ ಅಬ್ದುಲ್ ಮಾಲಿಕ್ ಕೊಯಂಗಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ವೈಚಾರಿಕ ಚಟುವಟಿಕೆಗಳ ಸಮನ್ವಯದೊಂದಿಗೆ ನಡೆಯಲಿರುವ “ಸಾಹಿತ್ಯೋತ್ಸವ”ವನ್ನು ಅರ್ಥಪೂರ್ಣ ಹಾಗೂ ಮಾದರಿಯುತವಾಗಿ ಆಯೋಜಿಸುವ ಉದ್ದೇಶದಿಂದ ಸಮಿತಿಯು ಈಗಾಗಲೇ ವಿವಿಧ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





m
