ಅರಂತೋಡಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ; ದೇಶಪ್ರೇಮದ ಸಂದೇಶ ಸಾರಿದ ಆಸೀಫ್ ಅಝ್ಹರಿ
ಅರಂತೋಡು: ಬದ್ರಿಯಾ ಜುಮಾ ಮಸೀದಿ, ಅನ್ವರುಲ್ ಹುದಾ ಯೂತ್‌ಮೆನ್ಸ್ ಅಸೋಸಿಯೇಷನ್ ಹಾಗೂ ನುಸ್ರತುಲ್ ಇಸ್ಲಾಂ ಮದರಸ, ಅರಂತೋಡು ಇದರ ಜಂಟಿ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಅವರು ಧ್ವಜಾರೋಹಣ ನೆರವೇರಿಸಿದರು. ಬದ್ರಿಯ ಜುಮಾ ಮಸೀದಿಯ ಖತೀಬ್ ಬಹು. ಆಸೀಫ್ ಅಝ್ಹರಿ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ಭಾಷಣ ಮಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಅವರ ತ್ಯಾಗ ಮತ್ತು ದೇಶಪ್ರೇಮವನ್ನು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಹಾಜಿ ಮೊಹಮ್ಮದ್, ಕಾರ್ಯದರ್ಶಿ ಕೆ.ಎಂ. ಮೂಸಾನ್, ಹಾಜಿ ಬದ್ರುದ್ದೀನ್ ಪಟೇಲ್, ಹಾಜಿ ಅಬ್ದುಲ್ ಖಾದರ್ ಪಟೇಲ್, ಹಾಜಿ ಅಬ್ದುಲ್ಲಾ ಮಾಸ್ಟರ್, ಕೆ.ಎಂ. ಮೊಯಿದು ಹಾಗೂ ಅನ್ವರುಲ್ ಹುದಾ ಯೂತ್‌ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ ಪಸಿಲ್, ಕೋಶಾಧಿಕಾರಿ ಸಂಸುದ್ದೀನ್ ಪೆಲ್ತಡಕ್ಕ ಸೇರಿದಂತೆ ಹಲವು ಗಣ್ಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದಲ್ಲದೆ ಸಂಸುದ್ದೀನ್ ಕ್ಯೂರ್, ಎ. ಹನೀಫ್, ಮುಜೀಬ್, ಅಬ್ದುಲ್ ರಹಿಮಾನ್ ಝುಹರಿ, ಕೆ.ಎಂ. ಉಸ್ಮಾನ್, ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ, ಆಶೀಕ್ ಕುಕ್ಕುಂಬಳ, ಜಾವೇದ್ ಪೆಲ್ತಾಡಕ್ಕ, ಎ. ಉಮ್ಮರ್, ಕೆ.ಎಂ. ಅನ್ವರ್, ಹಮೀದ್ ಬಿಳಿಯಾರ್, ಮುಝಮ್ಮಿಲ್ ಕುಕ್ಕುಂಬಳ, ಹಕೀಮ್ ಕೋಡಂಕೇರಿ, ಇಕ್ಬಾಲ್, ಹಾಷಿಂ ಕುಕ್ಕುಂಬಳ, ಸೂಪಿ ಅರಂತೋಡು, ಲತೀಫ್ ಮೊಟ್ಟೆಗಾರ್, ಜಿ. ಅಬ್ದುಲ್ಲಾ ಗುಂಡಿ, ಬಾತೀಶ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆ.ಎಂ. ಮೂಸಾನ್ ಸ್ವಾಗತಿಸಿದರು. ಪಸಿಲ್ ವಂದನಾರ್ಪಣೆ ನೆರವೇರಿಸಿದರು.






m


Scroll To Top