ಇತರೆ

ಸುಳ್ಯದಲ್ಲಿ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ: ಪ್ರವಾದಿ ಸಂದೇಶ ಕಾರ್ಯಕ್ರಮಕ್ಕೆ ಸಿದ್ಧತೆ

ತಾಲೂಕು ಮೀಲಾದ್ ಸಮಿತಿ ಕಚೇರಿ ಉದ್ಘಾಟನೆ; ಪ್ರಚಾರ ಕರಪತ್ರ ಬಿಡುಗಡೆ

ಸುಳ್ಯ: ತಾಲೂಕು ಮೀಲಾದ್ ಸಮಿತಿ, ಸುಳ್ಯ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 11ರಂದು ನಡೆಯಲಿರುವ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥ ಹಾಗೂ ಪ್ರವಾದಿ ಸಂದೇಶ, ಮದ್ಹ್ ಹಾಡುಗಳು ಮತ್ತು ದುಆ ಮಜ್ಲಿಸ್ ಕಾರ್ಯಕ್ರಮದ ಪೂರ್ವ ತಯಾರಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಕಾರ್ಯಕ್ರಮದ ಪೂರ್ವ ತಯಾರಿ ಹಾಗೂ ವಿವಿಧ ಕಾರ್ಯಚಟುವಟಿಕೆಗಳ ಸಮನ್ವಯಕ್ಕಾಗಿ ಸುಳ್ಯ ಗಾಂಧಿನಗರದ ಜಿಟಿಸಿ ಮೆಟ್ರೋ ಬನಾತ್ ಟವರ್‌ನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಕಚೇರಿಯನ್ನು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಚಾರ ಕರಪತ್ರವನ್ನು ಸುಳ್ಯ ಅನ್ಸಾರ್ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಬಿಡುಗಡೆಗೊಳಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಾಯಧನ ನೀಡಲು ಅನುಕೂಲವಾಗುವಂತೆ ಅಳವಡಿಸಲಾಗಿರುವ ಸ್ಕ್ಯಾನರ್ ವ್ಯವಸ್ಥೆಯನ್ನು ಉದ್ಯಮಿ ಫೈಸಲ್ ಕಟ್ಟೆಕ್ಕಾರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಅನ್ಸಾರ್ ಕಾರ್ಯದರ್ಶಿ ಬಷೀರ್ ಸಪ್ನಾ ಉಪಸ್ಥಿತರಿದ್ದರು. ತಾಲೂಕು ಮೀಲಾದ್ ಸಮಿತಿ ಅಧ್ಯಕ್ಷ ಮುನಾಫರ್ ನಾವೂರು ಅಧ್ಯಕ್ಷತೆ ವಹಿಸಿದ್ದರು.ಸಮಿತಿಯ ಪದಾಧಿಕಾರಿಗಳಾದ ಕೆ.ಎಸ್. ಉಮ್ಮರ್, ರಶೀದ್ ಜಟ್ಟಿಪ್ಪಳ್ಳ, ಶರೀಫ್ ಕಂಠಿ, ಇಕ್ಬಾಲ್ ಸುಣ್ಣಮೂಲೆ, ಖಲಂದರ್ ಎಲಿಮಲೆ, ಅಬ್ದುಲ್ ಕಲಾಂ ಬೀಜಕೊಚ್ಚಿ, ನವಾಜ್ ಪಂಡಿತ್ ಜಯನಗರ, ರಶೀದ್ ಅಡ್ವೋಕೇಟ್, ಮನ್ಸೂರ್ ಮೆಟ್ರೋ, ಅಚ್ರು ಕಲ್ಲುಮುಟ್ಲು, ಮುಸ್ತಫಾ ಪಂಡಿತ್, ತಾಬ್ಹಿ, ಹನೀಫ್ ಕಲ್ಲಪಳ್ಳಿ ಶುಹೈಲ್ ಬಿಎಂಎ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉನೈಸ್ ಪೆರಾಜೆ ಸ್ವಾಗತಿಸಿ ವಂದಿಸಿದರು.
ಮೀಲಾದ್ ಜಾಥದ ಮಾರ್ಗದ ರೂಪುರೇಷೆ, ಭಾಗವಹಿಸುವ ವಿವಿಧ ತಂಡಗಳ ಸಮನ್ವಯ, ಶಿಸ್ತು ಮತ್ತು ಸ್ವಯಂಸೇವಕರ ವ್ಯವಸ್ಥೆ, ಕಾರ್ಯಕ್ರಮದ ಪ್ರಚಾರ, ವೇದಿಕೆ ಹಾಗೂ ಧ್ವನಿ ವ್ಯವಸ್ಥೆ ಸೇರಿದಂತೆ ವಿವಿಧ ವಿಭಾಗಗಳ ಕಾರ್ಯಚಟುವಟಿಕೆಗಳನ್ನು ಸಮನ್ವಯಗೊಳಿಸುವಲ್ಲಿ ತಾತ್ಕಾಲಿಕ ಕಚೇರಿ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
m