ಇತರೆ

ಅರೋಹಣ -2026 ತರಬೇತಿ ಸಮ್ಮೇಳನ : ಜೇಸಿಐ ಸುಳ್ಯ ಪಯಸ್ವಿನಿಗೆ ಹಲವು ಪ್ರಶಸ್ತಿ

ತರಬೇತಿ ವಿಭಾಗ ವಲಯ ಮಟ್ಟದಲ್ಲಿ 4ನೇ ಸ್ಥಾನ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು 2026ನೇ ಸಾಲಿನಲ್ಲಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು, ಸೆ. 27ರಂದು ಮಂಗಳೂರಿನ ಪಾಲೇಮಾರ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಜೇಸಿಐ ಭಾರತ ವಲಯ–15ರ ‘ಅರೋಹಣ ತರಬೇತಿ ಸಮ್ಮೇಳನ–2026’ರಲ್ಲಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ.♦

 

ವಲಯ ಮಟ್ಟದ ತರಬೇತಿ ವಿಭಾಗದಲ್ಲಿ ಘಟಕವು ಆಯೋಜಿಸಿದ ವಿವಿಧ ತರಬೇತಿ ಕಾರ್ಯಕ್ರಮಗಳ ಸಾಧನೆಯನ್ನು ಪರಿಗಣಿಸಿ 4ನೇ ಸ್ಥಾನ ಗಳಿಸಿದೆ. ಅಲ್ಲದೆ, ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಅಭಿಯಾನ ತರಬೇತಿ ಕಾರ್ಯಾಗಾರ, ಘಟಕ ಮಟ್ಟದ ಇ.ಪಿ.ಎಸ್. ಕಾರ್ಯಾಗಾರ, ಜೆ.ಎ.ಎಫ್. ತರಬೇತಿ, ‘ಎಂಪವರಿಂಗ್ ಯೂತ್’ ಹಾಗೂ ‘ಫ್ಯೂಚರ್ ಟ್ರೈನಿಂಗ್’ ಸೇರಿದಂತೆ ಹಲವು ತರಬೇತಿ ಕಾರ್ಯಕ್ರಮಗಳನ್ನು ಗುರುತಿಸಿ ಘಟಕಕ್ಕೆ ವಿವಿಧ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜೇಸಿಐ ಭಾರತ ವಲಯ–15ರ ವಲಯಾಧ್ಯಕ್ಷ ಜೆ.ಎಫ್.ಎಸ್. ಸಂತೋಷ್ ಶೆಟ್ಟಿ ಹಾಗೂ ತರಬೇತಿ ಕೋ-ಆರ್ಡಿನೇಟರ್ ಜೇಸಿಐ ಸೆನೆಟರ್ ದೀಪಕ್ ರಾಜ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷೆ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೊಂಟಡ್ಕ, ಪೂರ್ವಾಧ್ಯಕ್ಷ ಪಿಪಿಪಿ ಅಶೋಕ್ ಚೂಂತಾರು, ಸದಸ್ಯರಾದ ಜೇಸಿ ಶೋಭಾ ಅಶೋಕ್ ಚೂಂತಾರು, ಜೇಸಿ ಉಮೇಶ್ ಬೊಳುಗಲ್ಲು, ಜೇಸಿ ವಿನೋದ್ ಮೂಡಗದ್ದೆ ಹಾಗೂ ಸಾಮಾಜಿಕ ಮುಖಂಡ ಸುಪ್ರೀತ್ ಮೊಂಟಡ್ಕ ಅವರು ಘಟಕದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ‘ಅರೋಹಣ ತರಬೇತಿ ಸಮ್ಮೇಳನ–2026’ಕ್ಕೆ ಹೆಸರನ್ನು ಸೂಚಿಸಿದ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ಅವರನ್ನು ವಿಶೇಷವಾಗಿ ಗುರುತಿಸಿ ವಲಯಾಧ್ಯಕ್ಷರು ಗೌರವಿಸಿದರು.