ಪುತ್ತೂರು: AIKMCC ಕೇಂದ್ರ ಸಮಿತಿ, ರಾಜ್ಯ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ OPPAM ಸುರಕ್ಷಾ ಯೋಜನೆಯಡಿ ಇತ್ತೀಚೆಗೆ ನಿಧನರಾದ ಅರ್ಷದ್ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನವನ್ನು ವಿತರಿಸಲಾಯಿತು.
AIKMCC ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ನೌಶಾದ್ ಅವರು ಅರ್ಷದ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಪರಿಹಾರ ಧನ ಹಸ್ತಾಂತರಿಸಿ ಸಾಂತ್ವನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, AIKMCC OPPAM ಸುರಕ್ಷಾ ಯೋಜನೆಯ ಉದ್ದೇಶ, ಸದಸ್ಯತ್ವದ ಮಹತ್ವ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಸದಸ್ಯರ ಕುಟುಂಬಗಳಿಗೆ ಯೋಜನೆಯ ಮೂಲಕ ದೊರೆಯುವ ಆರ್ಥಿಕ ನೆರವಿನ ಕುರಿತು ವಿವರಿಸಿದರು. ಸದಸ್ಯರ ಕುಟುಂಬಗಳ ಸಂಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ನಿಂತು ಅಗತ್ಯ ನೆರವು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅರ್ಷದ್ ಅವರ ಕಬರ್‌ಗೆ ಭೇಟಿ ನೀಡಿದ AIKMCC ಪದಾಧಿಕಾರಿಗಳು ಮಯ್ಯಿತ್‌ಗಾಗಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಲ್ಲೇಗ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ AIKMCC ರಾಷ್ಟ್ರೀಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ನಾಸರ್ V.K., ಯಶವಂತಪುರ ಏರಿಯಾ ಸಮಿತಿ ಅಧ್ಯಕ್ಷ ಅರ್ಷದ್ V.C., ಪ್ರಧಾನ ಕಾರ್ಯದರ್ಶಿ ಮಹ್ಮೂದ್ K., ಖಜಾಂಚಿ ಫೈಝಲ್, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲಿ ತಂಗಳ್, ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್ ನಂದಿನಿ ಹಾಗೂ ಹನೀಫ್ ಮುಕ್ವೆ ಉಪಸ್ಥಿತರಿದ್ದರು.
ಸುಳ್ಯ ಏರಿಯಾ ಸಮಿತಿ ಅಧ್ಯಕ್ಷ ಎಂಜಿನಿಯರ್ ಖಲಂದರ್ ಎಲಿಮಲೆ, ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ, ಪುತ್ತೂರು ಏರಿಯಾ ಸಮಿತಿ ಅಧ್ಯಕ್ಷ ಅಬೂಬಕರ್ ನಸೀಬ್, ಪ್ರಧಾನ ಕಾರ್ಯದರ್ಶಿ ಹನೀಫ್ ಮಧುರ, ಖಜಾಂಚಿ ಅಬ್ದುಲ್ ಅಝೀಝ್ ಹಾಜಿ, ವರ್ಕಿಂಗ್ ಸೆಕ್ರೆಟರಿ ಯೂಸುಫ್ ಸಾಲ್ಮರ, ಮಾಧ್ಯಮ ಕಾರ್ಯದರ್ಶಿ ರಫೀಕ್ ಬೆಟ್ಟಂಪಾಡಿ ಸೇರಿದಂತೆ ಸಮಿತಿ ಸದಸ್ಯರಾದ ಹನೀಫ್ ಹಾಜಿ ಉದಯ, AG ಯೂಸುಫ್, ನಿಜಾಮ್ ಮುಕ್ವೆ, C.K. ಹಸೈನಾರ್, ಪೈಚರ್ ಹಮೀದ್, ಝುಬೈರ್ MD, ಸಿರಾಜ್ C.K., ಸಿನ್ಸಾರ್ ಮುರ ಹಾಗೂ ಪತ್ರಕರ್ತರಾದ ಶೇಖ್ ಜೈನುದ್ದೀನ್ ಮತ್ತು ಯೂಸುಫ್ ರೆಂಜಲಾಡಿ ಭಾಗವಹಿಸಿದ್ದರು.
ಏನಿದು ? OPPAM ಸುರಕ್ಷಾ ಯೋಜನೆ
OPPAM ಸುರಕ್ಷಾ ಯೋಜನೆಯು ಸಂಕಷ್ಟದ ಸಂದರ್ಭದಲ್ಲಿ ಸದಸ್ಯರ ಕುಟುಂಬಗಳೊಂದಿಗೆ ನಿಂತು ಅವರಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವ ಮೂಲಕ ಸದಸ್ಯತ್ವ ಆಧಾರಿತ ಪರಸ್ಪರ ಸಹಕಾರ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಯೋಜನೆ ಎಂದು AIKMCC ಪದಾಧಿಕಾರಿಗಳು ತಿಳಿಸಿದರು.



