ಇತರೆ

ಸುಳ್ಯ: ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಶನ್‌ನಿಂದ ವಿದ್ಯಾರ್ಥಿಗೆ ಶೈಕ್ಷಣಿಕ ನೆರವು

ಸುಳ್ಯ, ಅ.6: ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಶನ್ (ರಿ), ಗಾಂಧಿನಗರ, ಸುಳ್ಯ ವತಿಯಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ವಿದ್ಯಾರ್ಥಿಯೊಬ್ಬರಿಗೆ ₹25,000 ಸಹಾಯಧನ ನೀಡಲಾಯಿತು.
ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯ. ಕಾಲೇಜಿನಲ್ಲಿ ದ್ವಿತೀಯ ವರ್ಷದ BBA (Logistics & Aviation) ವ್ಯಾಸಂಗ ಮಾಡುತ್ತಿರುವ ಗಾಂಧಿನಗರ ನಿವಾಸಿ ದಿವಂಗತ ಹಮೀದ್ ಇಮ್ರಾನ್ ಅವರ ಪುತ್ರ ಮಹಮ್ಮದ್ ಝೈನುದ್ದೀನ್ ಝಿದಾನ್ ಅವರಿಗೆ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಸಹಾಯಧನದ ಚೆಕ್ ವಿತರಿಸಲಾಯಿತು.

ಅಸೋಸಿಯೇಶನ್‌ನ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಅವರು ₹25,000 ಮೊತ್ತದ ಚೆಕ್ ಅನ್ನು ವಿದ್ಯಾರ್ಥಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಹನೀಫ್, ನಿರ್ದೇಶಕ ಅಬೂಬಕ್ಕರ್ ಎಸ್.ಪಿ. ಹಾಗೂ ಮ್ಯಾನೇಜರ್ ಮುನೀರ್ ಉಪಸ್ಥಿತರಿದ್ದರು.