ಕನಕಮಜಲಿನ ಎರಡು ವಾರ್ಡಿನಲ್ಲಿ ಒಟ್ಟು 47 ಮುಸ್ಲಿಂ ಮತದಾರರ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿದ ಬಿಎಲ್ಎ–2
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಬಿಎಲ್ಎ–2 ಸುನೀಲ್ ರವರು ಸಲ್ಲಿಸಲಾಗಿದ್ದ ಆಕ್ಷೇಪಣಾ ಅರ್ಜಿಗಳನ್ನು ಹಿಂಪಡೆದುಕೊಂಡಿದ್ದಾರೆ.
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಭಾಗ ಸಂಖ್ಯೆ 194ರ ಮತದಾರರ ಪಟ್ಟಿಯಲ್ಲಿರುವ ಸುಮಾರು 15 ಮುಸ್ಲಿಂ ಮತದಾರರ ಹೆಸರುಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 24ರಂದು ಬಿಎಲ್ಎ ೨ ರವರು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ವಿಷಯ ತಿಳಿದ ಸಂಬಂಧಪಟ್ಟ ಮತದಾರರು, ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದ ಬಿಎಲ್ಎ ಸುನೀಲ್ ಅವರನ್ನು ಸಂಪರ್ಕಿಸಿ ವಿವರಣೆ ಕೇಳಿದ್ದಾರೆ. ಈ ವೇಳೆ ಸಂಬಂಧಪಟ್ಟ ಮತದಾರರು ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದರೂ, ಸರಿಯಾದ ಮಾಹಿತಿ ಪರಿಶೀಲಿಸದೆ ಆಕ್ಷೇಪಣಾ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ ಎಂದು ಮತದಾರರು ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ 15 ಮತದಾರರರೂ ಸಹ ಪೊಲೀಸ್ ದೂರು ನೀಡಲು ಮುಂದಾಗಿದ್ದರು ಎನ್ನಲಾಗಿದೆ.
ವಿಷಯ ತಿಳಿದ ಬಳಿಕ ಸುನೀಲ್ ಅವರು ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ಭೇಟಿ ಮಾಡಿ, ತಾವು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಮತದಾರರು ಅದೇ ಗ್ರಾಮದಲ್ಲಿಯೇ ವಾಸಿಸುತ್ತಿದ್ದಾರೆ ಹಾಗೂ ತಮಗೆ ದೊರೆತಿದ್ದ ಮಾಹಿತಿ ತಪ್ಪಾಗಿತ್ತು ಎಂದು ತಿಳಿಸಿದ್ದಾರೆ ಈ ಹಿನ್ನೆಲೆಯಲ್ಲಿ ತಾವು ಈ ಹಿಂದೆ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಗಳನ್ನು ಅಕ್ಟೋಬರ್ 7ರಂದು ಅಧಿಕೃತವಾಗಿ ಹಿಂಪಡೆದುಕೊಂಡಿದ್ದಾರೆ.


