ಇತರೆ

ಫ್ರೆಂಡ್ಸ್ ಟ್ರೋಫಿ’ಗೆ ಸಜ್ಜಾದ ಸಾಗರ್ ಎಫ್‌ಸಿ ಜಟ್ಟಿಪಳ್ಳ; ಅಧಿಕೃತ ಜರ್ಸಿ ಅನಾವರಣ

ಸುಳ್ಯ: ಅಕ್ಟೋಬರ್ 18ರಂದು ಸುಳ್ಯದ ಗಾಂಧಿನಗರದಲ್ಲಿ ನಡೆಯಲಿರುವ ‘ಫ್ರೆಂಡ್ಸ್ ಟ್ರೋಫಿ’ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಸಾಗರ್ ಎಫ್‌ಸಿ ಜಟ್ಟಿಪಳ್ಳ ತಂಡದ ಆಟಗಾರರು ಧರಿಸಲಿರುವ ಅಧಿಕೃತ ಜರ್ಸಿಯನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಲಾಯಿತು.

ಅಕ್ಟೋಬರ್ 15ರಂದು ಅರಂಬೂರು ಟರ್ಫ್-9 ಮೈದಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉದ್ಯಮಿ ಫೈಝಲ್ ಕಟ್ಟಿಕ್ಕಾರ್ ಹಾಗೂ ಅಲ್ಫಾ ಹನೀಫ್ ಪೈಚಾರು ಅವರು ತಂಡದ ನೂತನ ಜರ್ಸಿಯನ್ನು ಅನಾವರಣಗೊಳಿಸಿ, ಆಟಗಾರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಶೀದ್ ಜಟ್ಟಿಪಳ್ಳ, ಮುನಾಫರ್ ನಾವೂರು, ಶಿಹಾಬ್ ಶಾ ಜಟ್ಟಿಪಳ್ಳ, ಶಮೀಮ್, ತಂಡದ ವ್ಯವಸ್ಥಾಪಕ ನಾಸೀರ್ ಸಿ.ಎ., ಶಿಹಾಬ್ ಚಿನ್ನು, ಇಮ್ರಾನ್ ಅಮೈ ಸೇರಿದಂತೆ ಸಾಗರ್ ಎಫ್‌ಸಿ ಜಟ್ಟಿಪಳ್ಳ ತಂಡದ ಆಟಗಾರರು ಉಪಸ್ಥಿತರಿದ್ದರು. ಸಾಗರ್ ಎಫ್‌ಸಿ ಜಟ್ಟಿಪಳ್ಳ ತಂಡವು ‘ಫ್ರೆಂಡ್ಸ್ ಟ್ರೋಫಿ’ಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೊಂದಿಗೆ ಸಜ್ಜಾಗಿದೆ.