Featured, ಇತರೆ

SKSSF ಪೇರಡ್ಕ–ಗೂನಡ್ಕ ಶಾಖೆಯಿಂದ ಮಾಸಿಕ ಮಜ್ಲಿಸುನ್ನೂರ್ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯ, ಅ.25: SKSSF ಪೇರಡ್ಕ–ಗೂನಡ್ಕ ಶಾಖೆಯ ವತಿಯಿಂದ ಮಾಸಿಕ ಮಜ್ಲಿಸುನ್ನೂರ್ ಹಾಗೂ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 25ರಂದು ಪೇರಡ್ಕ ಮಸೀದಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ SKSSF ಸುಳ್ಯ ವಲಯ ಅಧ್ಯಕ್ಷ ಅಕ್ಬರ್ ಕರಾವಳಿ, ಉಪಾಧ್ಯಕ್ಷ ನಹೀಂ ಫೈಝಿ, ಈಸ್ಟ್ ಜಿಲ್ಲಾ ಕೌನ್ಸಿಲರ್ ಕಾದರ್ ಮೊಟ್ಟೆಂಗಾರ್, ಸುಳ್ಯ ಕ್ಲಸ್ಟರ್ ಅಧ್ಯಕ್ಷ ಶಂಸುದ್ದೀನ್ ಅರಂತೋಡು ಹಾಗೂ ಕೋಶಾಧಿಕಾರಿ ಖಲೀಲ್ ಸೆಂಟ್ಯಾರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪೇರಡ್ಕ ಜಮಾಅತ್ ಸಮಿತಿಯಲ್ಲಿ ಹಲವು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿಧನರಾದ ಹಿರಿಯರಾದ ಮರ್ಹೂಂ ಪಾಂಡಿ ಅಬ್ಬಾಸ್ ಅವರ ಸ್ಮರಣಾರ್ಥ ವಿಶೇಷ ತಹ್ಲೀಲ್ ನಡೆಸಿ, ಅವರ ಪರಲೋಕ ಜೀವನದ ಒಳಿತಿಗಾಗಿ ಪ್ರಾರ್ಥಿಸಲಾಯಿತು.

ಮಜ್ಲಿಸುನ್ನೂರ್ ಹಾಗೂ ವಿಶೇಷ ದುಆ ಕಾರ್ಯಕ್ರಮದ ನೇತೃತ್ವವನ್ನು ನಹೀಂ ಫೈಝಿ ವಹಿಸಿದ್ದರು. ಸಾಜಿದ್ ಅಝ್ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾದರ್ ಮೊಟ್ಟೆಂಗಾರ್ ಸ್ವಾಗತಿಸಿ, ವಂದಿಸಿದರು. ಜಮಾಅತ್ ಸಮಿತಿ ಸದಸ್ಯರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.