ಸುಳ್ಯ ಟೌನ್, ಸಮಸ್ಯೆಗಳ ಸೈಟ್
ಜನಪ್ರತಿನಿದಿನಗಳು ಸಮಸ್ಯೆ ಪರಿಹಾರಕ್ಕೆ ಶ್ರಮಿಸಿಲ್ಲವೇ…?!
ಎಪಿಸೋಡ್ – 4
ಸುಳ್ಯ ನಗರ ಎಂದರೆ ಸುಳ್ಯ ತಾಲೂಕಿನ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಕೇಂದ್ರ, ಸುಳ್ಯ ವಿಧಾನಸಭಾ ಅನುಸೂಚಿತ ಜಾತಿ ಮೀಸಲಾತಿ ಕ್ಷೇತ್ರವಾಗಿದ್ದು ಇಲ್ಲಿನ ಜನಪ್ರತಿನಿಧಿನಗಳು ಮನಸ್ಸು ಮಾಡಿದ್ದರೆ ಸುಳ್ಯದ ಚಿತ್ರಣವನ್ನೇ ಬದಲಾಯಿಸಬಹುದಿತ್ತು, ಆದರೆ ಅವರ ಸಮಸ್ಯೆಯನ್ನು ಬಗೆಹರಿಸಲು ಅವರಲ್ಲಿ ಸಮಯವಿಲ್ಲದೆ ಇರುವಾಗ ನಾವುಗಳು ಅದರ ಬಗ್ಗೆ ಹೇಳುವುದೇ ದೊಡ್ಡ ತಪ್ಪು. ಆದರೂ ಕಣ್ಣಿಗೆ ಕಂಡ ತಪ್ಪುಗಳನ್ನು ಹೇಳದೆ ಇದ್ದರೆ ಹೇಗೇ, ಮನಸಾಕ್ಷಿ ಒಪ್ಪುತ್ತಿಲ್ಲ.
ಆ ಎಲ್ಲಾ ಕಾರಣ ಇಟ್ಟುಕೊಂಡು ನಾನು ಕಂಡ ಸಮಸ್ಯೆಗಳಿಗೆ ಅಕ್ಷರ ರೂಪ ನೀಡಿ ನಿಮ್ಮ ಮುಂದೆ ಕಳೆದ ಮೂರು ಎಪಿಸೋಡ್ ಗಳಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಹೌದು ಒಂದು ನಗರ ಅಂದಮೇಲೆ ಅಲ್ಲಿ ಸಣ್ಣ ಸಣ್ಣ ಮೂಲಭೂತ ಸಮಸ್ಯೆಗಳು ಸಾಮಾನ್ಯ ಆದರೆ ಸುಳ್ಯದಲ್ಲಿ ಇದು ಸಾಮಾನ್ಯವಾಗಿಲ್ಲ, ಸಮಸ್ಯೆಗಳ ಜೊತೆ ಹೊಂದಿಕೊಂಡು ಹೆಜ್ಜೆ ಇಡುವುದು ಇಲ್ಲಿಯ ಬಹುತೇಕ ಜನರಿಗೆ ದಿನಚರಿಯಾಗಿದೆ.
ಬೇಸಿಗೆ ಬಂದರೆ ನೀರಿನ ಸಮಸ್ಯೆ, ಮಳೆ ಬಂದರೆ ರೋಡಿನಲ್ಲಿ ಕೆಸರು, ರೋಡಿನ ಹೊಂಡದಲ್ಲಿ ನೀರು, ಚರಂಡಿಯಿಂದ ಹೊರಬರುವ ಕೊಳಚೆನೀರು ಹೀಗೆ ಉದ್ದನೆಯ ಪಟ್ಟಿಯೇ ಇದೆ.
ಸುಳ್ಯ ತಾಲೂಕು ಮೂಲಕ ಹಾದು ಹೋಗುವ ಮಾಣಿ – ಮೈಸೂರು ರಾಜ್ಯ ಹೆದ್ದಾರಿ (ಎಸ್ ಎಚ್ 88 ಅಥವಾ ಎನ್ ಎಚ್ 275) ರಸ್ತೆಯಲ್ಲಿ ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳಿಗೆ ಲೆಕ್ಕವೇ ಇರಲಿಕಿಲ್ಲ, ಅದರಲ್ಲಿ ಹೆಚ್ಚು ಅಪಘಾತ ನಡೆದದ್ದು ಸುಳ್ಯ ತಾಲೂಕಿನ ಕನಕಮಜಲು – ಸಂಪಾಜೆ ರಸ್ತೆಯಲ್ಲಿ, ಇಷ್ಟು ಅಪಘಾತ ಸಂಭವಿಸಿದರು ಜನಪ್ರತಿನಿದಿನಗಳು ಈ ರಾಷ್ಟ್ರೀಯ ರಸ್ತೆಯ ಸುರಕ್ಷತೆಯನ್ನು ಪರಿಶೀಲನೆ ಮಾಡಲು ಎಲ್ಲಿಯೂ ಒತ್ತಿ ಹೇಳಲಿಲ್ಲ.
2010 ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದ್ದ ಮಾಣಿ – ಸಂಪಾಜೆ ರಸ್ತೆಯ ಕಾಮಗಾರಿ ಪೂರ್ಣಗೊಂಡದ್ದು 2015 ರಲ್ಲಿ ಇದರ ಮದ್ಯೆ ಸುಳ್ಯ ತಾಲೂಕಿಗೆ ಒಳಪಟ್ಟ ಪೈಚಾರ್ ಜಂಕ್ಷನ್ ಸೇತುವೆ ಮತ್ತು ಸಂಪಾಜೆ ಗ್ರಾಮದ ಕಡೆಪಾಲ ಸೇತುವೆ ಪೂರ್ಣಗೊಳಿಸಿದ್ದು 2024 ರಲ್ಲಿ ಎಂಬುದು ವಿಶೇಷ.
ಸುಳ್ಯ ವಿಧಾನ ಸಭಾ ಕ್ಷೇತ್ರವು ಮಂಗಳೂರ ಲೋಕಸಭಾ ಕ್ಷೇತ್ರದಲ್ಲಿಯೇ ಅತೀ ಹೆಚ್ಚಿನ ವಿಸ್ತೀರ್ಣವಿರುವ ಕ್ಷೇತ್ರ, ನೆಲ್ಯಾಡಿಯಿಂದ ಸಂಪಾಜೆ ವರೆಗೆ ಸರ್ಕಾರದ ಯೋಜನೆಯ ಅನೇಕ ರಸ್ತೆಗಳು ನಿರ್ಮಾಣವಾಗಿದ್ದರೂ ಈಗ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಗಳೇ ಹೆಚ್ಚಿದೆ, ಅನುಮಾನ ವಿದ್ದರೆ ಬೆಳ್ಳಾರೆ ನಿಂತಿಕಲ್ಲು ಮೂಲಕ ಮುರುಳ್ಯ ವರೆಗೆ ಒಮ್ಮೆ ಹೋಗಿ ಬನ್ನಿ. ಇಲ್ಲಿಯ ತಾಲೂಕಿನ ಕೇಂದ್ರಕ್ಕೆ ಗ್ರಾಮದಿಂದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮನವಿ ಹಿಡಿದು ಕೊಂಡು ತಾಲೂಕು ಕಚೇರಿಗೆ ಬರುವಾಗ ಇಲ್ಲಿನ ಸಮಸ್ಯೆಗಳು ನಮ್ಮನ್ನು_ ನೋಡಿ ನಗುತ್ತಿರಬಹುದು.
ನಗರದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದ ಜನಪ್ರತಿನಿದಿನಗಳಿಂದ, ಅಧಿಕಾರಿ, ಆಡಳಿತ ವರ್ಗದಿಂದ ಗ್ರಾಮ ಮಟ್ಟದ ಸಮಸ್ಯೆಯನ್ನು ಬಗೆಹರಿಸಲು ಆಸಕ್ತಿಪಡಿಸುವರೇ ಹಾಗಿದ್ದರೇ ಸುಳ್ಯದ ಗ್ರಾಮೀಣ ಮಟ್ಟದ ಕೃಷಿಕರ ದೊಡ್ಡ ಸಮಸ್ಯೆಯಾದ ಆನೆದಾಳಿ ನಿರಂತರವಾಗಿ ನಡೆಯುತ್ತಿದ್ದರು ಇದಕ್ಕೆ ಪರಿಹಾರವಾಗಿ ಸೋಲಾರ್ ಬೇಲಿ ವ್ಯವಸ್ಥೆಯೋ ಅಥವಾ ಪರ್ಯಾಯ ವ್ಯವಸ್ಥೆಯೋ ಮಾಡುತಿದ್ದರು. ನಗರದ ಬೀದಿನಾಯಿ ಸಮಸ್ಯೆಗೆ ಪರಿಹಾರ ಕಾಣದ ಇವರ ಜೊತೆ ಆನೆಯ ಬಗ್ಗೆ ಮಾತಾನಾಡಿದರೆ ಹೇಗೇ ಅಲ್ಲವೇ.
ಕೃಷಿಪತ್ತಿನ ಚುನಾವಣೆ ನಡೆದಿದೆ ಗೆದ್ದ ನಿರ್ದೇಶಕರು ಗಳಾದರೂ ಕೃಷಿಕರ ಆನೆದಾಳಿ, ಮಂಗನ ಕಾಟ, ಹಳದಿ ರೋಗ ಮುಂತಾದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿನಗಳಿಗೆ ಬಿಸಿ ಮುಟ್ಟಿಸಲಿ, ಸಾಮಾನ್ಯ ಸಭೆಯು ಕೇವಲ ಚಹಾ ಬಿಸ್ಕಟ್ ನಲ್ಲಿ ಮುಗಿಯದೆ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಲಿ.
ಜನಪ್ರತಿನಿಧಿನಗಳು 5 ವರ್ಷದ ಆಡಳಿತ ಅವಧಿಯಲ್ಲಿ ಅಪರೂಪಕ್ಕೆ ಕಂಡರೂ, ಆಡಳಿತದ ಕೊನೆಯ 5 ತಿಂಗಳು ಓಡಾಡಿ, ಹಾರಡಿ, ಮುದ್ದಾಡಿ ಗೆಲ್ಲುವ ಆಡಳಿತ ಪಕ್ಷದ ಜನಪ್ರತಿನಿಧಿನಗಳ ಮುಂದೆ ಸಮಸ್ಯೆಗಳ ಬಗ್ಗೆ ಹೇಳಿದರೆ ಕೇಳದಿದ್ದಾಗ, ವಿರೋಧ ಪಕ್ಷದ ಪ್ರತಿನಿಧಿನಗಳಲ್ಲಿ ಹೇಳಿದರೆ ಕೇವಲ ಪ್ರತಿಕಾಗೋಷ್ಠಿ ನಡೆಸಿ ಫೋಟೋ ಕ್ಲಿಕಿಸಿ ನ್ಯೂಸ್ ಮಾಡಿ ಹೋಗಿರುವುದು ಅಲ್ಲದೇ ಶಾಶ್ವತ ಪರಿಹಾರ ಎಲ್ಲಿಯೂ ಕಂಡಿಲ್ಲ.
ಇಲ್ಲಿಗೆ ಸುಳ್ಯ ಟೌನ್ ಸಮಸ್ಯೆಗಳ ಸೈಟ್ ನ್ನು ಕೊನೆಗೊಳಿಸುತ್ತಿದ್ದೇನೆ.
ಸುಳ್ಯದ ಸಮಸ್ಯೆಗಳ ಬಗ್ಗೆ ತಿಳಿಸಿದ ಮಿತ್ರರಿಗೆ, ಅಭಿಪ್ರಾಯ ತಿಳಿಸಿದ ಓದುಗರಿಗೆ
ಧನ್ಯವಾದಗಳು.
✍🏻ಫಾರೂಕ್ ಕಾನಕ್ಕೋಡ್ (ಫಾಕಾ)





m


✍🏻ಫಾರೂಕ್ ಕಾನಕ್ಕೋಡ್ (ಫಾಕಾ) ರವರ ಬರಹಗಳು👇