Featured, ಅಂಕಣ, ಸ್ಥಳೀಯ

SSF ಗಾಂಧಿನಗರ ಯುನಿಟ್ ವಾರ್ಷಿಕ ಕೌನ್ಸಿಲ್ ನೂತನ ಸಮಿತಿ ಅಸ್ತಿತ್ವಕ್ಕೆ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ಸಮಿತಿಯ ವಾರ್ಷಿಕ ಮಹಾಸಭೆ ಜನವರಿ 02ರಂದು ಯುನಿಟ್ ಅಧ್ಯಕ್ಷ ಮುಸ್ತಫಾ ಬಿ.ಎ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಎಸ್.ವೈ.ಎಸ್ ಗಾಂಧಿನಗರ ಯುನಿಟ್ ಉಪಾಧ್ಯಕ್ಷರಾದ ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ತಂಙಳ್ ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ.ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸಭೆ ಉದ್ಘಾಟಿಸಿದರು‌.

ಸಾಂಘಿಕ ಅವಧಿಯ ಒಂದು ವರ್ಷದ ವಾರ್ಷಿಕ ವರದಿ ಮತ್ತು‌ ವಾರ್ಷಿಕ ಆಯಾ-ವ್ಯಯಗಳ ಲೆಕ್ಕ ಪತ್ರ ಮಂಡಿಸಿಲಾಯಿತು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ನಾಯಕರಾದ ಅಝೀಝ್ ಮಾಸ್ಟರ್ ಏಣಾವರ ಹಾಗೂ ಅತ್ಹಾಸ್ ಮೊಗರ್ಪಣೆ ವೀಕ್ಷಕರಾಗಿ ಆಗಮಿಸಿ ಸಭೆ ನಿಯಂತ್ರಿಸಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಸಬಾಹ್ ಸಖಾಫಿ ಅಲ್ ಹಿಮಮಿ ಸಂಘಟನಾ ತರಬೇತಿ ನೀಡಿದರು. ಕೆ.ಎಂ.ಜೆ ಗಾಂಧಿನಗರ ಯುನಿಟ್ ಅಧ್ಯಕ್ಷರಾದ ಅಬೂಬಕರ್ ನೂತನ ಸಮಿತಿಗೆ ಶುಭ ಹಾರೈಸಿದರು. ಮುಖ್ತಾರ್ ಸ್ವಾಗತಿಸಿ ಮುಸ್ತಫಾ ವಂದಿಸಿದರು.

ನೂತನ ಸಮಿತಿ : ಫಯಾಝ್ ಜಿ.ಎಲ್ (ಅಧ್ಯಕ್ಷ) ಕಮಾಲ್ (ಉಪಾಧ್ಯಕ್ಷ) ಮುಸ್ತಫಾ ಬಿ.ಎ (ಪ್ರ. ಕಾರ್ಯದರ್ಶಿ) ಸಿದ್ದೀಖ್ (ಫಿನಾನ್ಸ್ ಕಾರ್ಯದರ್ಶಿ) ಸಾಜಿದ್ ಹಿಮಮಿ (ದಅವಾ ಕಾರ್ಯದರ್ಶಿ) ಸ್ವಾದಿಖ್ ಗಾಂಧಿನಗರ (ಕ್ಯೂ.ಡಿ ಕಾರ್ಯದರ್ಶಿ) ರಿಝ್ವಾನ್ ಕಲ್ಲುಮುಟ್ಲು (ಜಿ.ಡಿ ಕಾರ್ಯದರ್ಶಿ) ಮುಖ್ತಾರ್ (ಕ್ಯಾಂಪಸ್ ಕಾರ್ಯದರ್ಶಿ) ಮಫಾಝ್ (ರೈಂಬೋ ಕಾರ್ಯದರ್ಶಿ) ಆಬಿದ್, ಬಶೀರ್, ಸ್ವಾದಿಖ್ ಪಿ.ಜಿ, ಶರಫುದ್ದೀನ್, ಸಲ್ಮಾನ್ ಫಾರಿಸ್, ಸೈಫುದ್ದೀನ್ ಅಶ್ರಫಿ, ಸಬಾಹ್ ಹಿಮಮಿ, ರಿಯಾಝ್ (ಸದಸ್ಯರು)

m