Featured, ಸ್ಥಳೀಯ

ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಕಾರ್ಯಕರ್ತ ಉನೈಸ್ ಪೆರಾಜೆ ಬಗ್ಗೆ ನಿಂದಿಸಿ ಅಪಪ್ರಚಾರ : ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಖಂಡನೆ

ಸಾಮಾಜಿಕ ಕಾರ್ಯಕರ್ತ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಸಂಘಟಕ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾಧ್ಯಕ್ಷ, ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ )ಪೆರಾಜೆ ಇದರ ಅಧ್ಯಕ್ಷ, ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಇದರ ಸದಸ್ಯ, ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘ ಇದರ ಉಪಾಧ್ಯಕ್ಷರಾಗಿರುವ ಉನೈಸ್ ಪೆರಾಜೆ ಯವರನ್ನು ಸಾಮಾಜಿಕ ಜಾಲತಾಣದಲ್ಲಿ ವೈಯುಕ್ತಿಕವಾಗಿ ನಿಂದನೆ ಮಾಡಿದ್ದು ಕಂಡುಬಂದಿದ್ದು ಈ ಕೃತ್ಯವನ್ನು ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ತೀವ್ರವಾಗಿ ಖಂಡಿಸುತ್ತದೆ. ಹಲವಾರು ವರ್ಷಗಳಿಂದ ಬೇರೆ ಬೇರೆ ರೂಪದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉನೈಸ್ ಪೆರಾಜೆ ಯವರು ಯಾವುದೇ ಪ್ರಚಾರ ವನ್ನು ಬಯಸಿದವರಲ್ಲ ಆದರೂ ಅವರನ್ನು ತೇಜೋವಧೆ ಮಾಡುವ ಉದ್ದೇಶ ವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣ ದಲ್ಲಿ ಅಪಪ್ರಚಾರ ಮಾಡಿರುವುದು ಖಂಡನೀಯ. ಸಮಾಜದಲ್ಲಿ ಜನ ಸೇವೆ, ಸಾಮಾಜಿಕ ಬದ್ದತೆ ಯೊಂದಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ವ್ಯಕ್ತಿಗಳ ವಿರುದ್ದ ಇಂತಹ ಅಪಪ್ರಚಾರಗಳನ್ನು ಮಾಡುವ ವ್ಯಕ್ತಿಗಳು ಅವರು ಸಮಾಜದಲ್ಲಿ ಯಾವುದೇ ಒಳ್ಳೆಯ ಕೆಲಸಗಳಾಗಲಿ, ಸಂಕಷ್ಟದಲ್ಲಿರುವವರ ಪರವಾಗಲಿ ಏನನ್ನೂ ಮಾಡದೆ ವಿಘ್ನ ಸಂತೋಷಿ ಗಳಾಗಿರುತ್ತಾರೆ. ಇಂತಹ ವಿಕೃತಿ ಮನಸ್ಥಿತಿ ಉಳ್ಳವರು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗಳ ವಿರುದ್ಧ ಅಪಪ್ರಚಾರ ಮಾಡಿ ಸಂತೋಷ ಪಡುತ್ತಿದ್ದಾರೆ. ಉನೈಸ್ ಪೆರಾಜೆ ರವರು ಮಾದಕ ವ್ಯಸನದ ವಿರುದ್ಧ ಪೆರಾಜೆ ಯಿಂದ ಕನ್ಯಾ ಕುಮಾರಿ ವರೆಗೆ ಯಾತ್ರೆ ಮಾಡಿ ವ್ಯಸನದ ಬಗ್ಗೆ ಜಾಗೃತಿಯನ್ನು ಮೂಡಿಸಿದ ವೈಕ್ತಿ ಯಾಗಿದ್ದಾರೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಯಾವುದೇ ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದು ಬಿಟ್ಟು ಇಂತಹ ಅಪಪ್ರಚಾರಗಳಲಿ ತೊಡಗಿಸಿ ಕೊಳ್ಳವ ಸಮೂಹದ ಎದುರು ಸಮಾಜ ನಿಲ್ಲುವಂತಾಗ ಬೇಕಾಗಿದೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸ ಮಾಡುವ ವ್ಯಕ್ತಿಗಳೊಂದಿಗೆ ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಷನ್ ಸಂಪೂರ್ಣವಾಗಿ ಸಹಕಾರ ನೀಡಲಿದೆ ಅಲ್ಲದೆ ಇಂತಹ ನೀಚ ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಉನೈಸ್ ರವರೊಂದಿಗೆ ಮುಸ್ಲಿಂ ಯೂಥ್ ಫೆಡರೇಶನ್ ಸುಳ್ಯ ಸಂಪೂರ್ಣ ವಾಗಿ ಸಹಕರಿಸಲಿದೆ.

m