Featured, ಅಂಕಣ, ಸ್ಥಳೀಯ

ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜುಬಿಲಿ ಪ್ರಚಾರಾರ್ಥ ಎಸ್.ಜೆ.ಎಂ ಪಾಲಿಬೆಟ್ಟ ರೇಂಜ್ ವತಿಯಿಂದ ಗೋಲ್ಡನ್ ವಾಕ್

ಜನವರಿ 12ರಂದು ಎಮ್ಮೆಮ್ಮಾಡುವಿನಲ್ಲಿ ಜರಗಲಿರುವ ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನದ ಪ್ರಚಾರಾರ್ಥ ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) ಎಸ್.ಜೆ.ಎಂ ಪಾಲಿಬೆಟ್ಟ ರೇಂಜ್ ವತಿಯಿಂದ ರೇಂಜ್ ವ್ಯಾಪ್ತಿಯ 50 ಮುಅಲ್ಲಿಮರ ಗೋಲ್ಡನ್ ವಾಕ್ ಕಾಲ್ನಡಿಗೆ ಜಾಥಾ ಜನವರಿ 08ರಂದು ಸಿದ್ದಾಪುರದಲ್ಲಿ ಜರಗಿತು‌.

ಎಸ್.ಜೆ.ಎಂ ಪಾಲಿಬೆಟ್ಟ ರೇಂಜ್ ಸಮಿತಿ ಅಧ್ಯಕ್ಷರಾದ ನೌಷಾದ್ ಝುಹ್ರಿ ಹುಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗುಯ್ಯ ಜುಮಾ ಮಸ್ಜಿದ್ ಖತೀಬ್ ಹನೀಫ್ ರಹ್ಮಾನಿ ದುಆದೊಂದಿಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ರೇಂಜ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಬಾಹ್ ಸಖಾಫಿ ಪಾಲಿಬೆಟ್ಟ ಗೋಲ್ಡನ್ ಜುಬಿಲಿ ಸಂದೇಶ ಭಾಷಣಗೈದರು. ಫಿನಾನ್ಸ್ ಕಾರ್ಯದರ್ಶಿ ಅಬೂಬಕರ್ ಮದನಿ ಮಲಗೋಡು ಕಾರ್ಯಕ್ರಮ ನಿರೂಪಿಸಿದರು. ರೇಂಜ್ ವ್ಯಾಪ್ತಿಯ 15 ಮದ್ರಸಾಗಳ 50 ಮುಅಲ್ಲಿಮರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರೇಂಜ್ ಸಮಿತಿ ಕಾರ್ಯದರ್ಶಿ ಝುಬೈರ್ ಸಅದಿ ಅಲ್ ಅಫ್ಳಲಿ ಸ್ವಾಗತಿಸಿ ಕಾರ್ಯದರ್ಶಿ ರಫೀಖ್ ಸಅದಿ ವಂದಿಸಿದರು.

m