Featured, ಅಂಕಣ, ಸ್ಥಳೀಯ

ಭಾರತೀಯ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ NSUI ಕೊಡಗು ಜಿಲ್ಲೆ ವತಿಯಿಂದ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರು

ಭಾರತೀಯ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ NSUI ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕೊಡಗು ಜಿಲ್ಲೆಯಾದ್ಯಂತ ಸರ್ವ ವಿದ್ಯಾರ್ಥಿಗಳಿಗೂ ಆಧುನಿಕ ಭಾರತದಲ್ಲಿ ಜವಹರಲಾಲ್ ನೆಹರು ರವರ ಕೊಡುಗೆ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಪ್ರಥಮ ಬಹುಮಾನ 10,000, ದ್ವಿತೀಯ 5000 ಹಾಗೂ ತೃತೀಯ ಬಹುಮಾನ 2500 ಎಂದು ಜಿಲ್ಲಾ ಸಮಿತಿಯು ತಿಳಿಸಲಾಗಿತ್ತು, ಇನ್ನೂರಕ್ಕಿಂತ ಹೆಚ್ಚಿನ ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಇದರ ವಿಜೇತರನ್ನು ಇಂದು ವಾಟ್ಸಪ್ ಪೋಸ್ಟರ್ ಮುಖಾಂತರ ಘೋಷಿಸಲಾಗಿತ್ತು, ಇದರ ಪ್ರಥಮ ಸ್ಥಾನವನ್ನು ಶಾಝೀಯಾ ಮಡಿಕೇರಿ, ದ್ವಿತೀಯ ಸ್ಥಾನವನ್ನು ಸನಾ ಲಾರೆನ್ಸ್ ವಿರಾಜಪೇಟೆ, ತೃತೀಯ ಸ್ಥಾನವನ್ನು ಗಗನ್ ನಾಪೋಕ್ಲು, ಹಾಗೂ ಇಪ್ಪತ್ತು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪ್ರಬಂಧ ಬರೆದು ಪ್ರೋತ್ಸಾಹ ಬಹುಮಾನಕ್ಕೆ ಆಯ್ಕೆಯಾಗಿರುತ್ತಾರೆ, ಪ್ರಬಂಧ ಬರೆದ ಸರ್ವ ವಿದ್ಯಾರ್ಥಿಗಳಿಗೂ ಜಿಲ್ಲಾ ಸಮಿತಿ ವತಿಯಿಂದ ಪ್ರಕಟಣೆಯಲ್ಲಿ ಧನ್ಯವಾದ ತಿಳಿಸಿರುತ್ತಾರೆ.

m