ಇತರೆ

ಆಮ್ ಆದ್ಮಿ ಪಕ್ಷದಲ್ಲಿ ಸನಾತನ ಸೇವಾ ಸಮಿತಿ ಆರಂಭ: ಬಿಜೆಪಿಯಿಂದ ಬಂದವರಿಗೆ ಹುದ್ದೆಗಳ ಭಾಗ್ಯ;

ಆಮ್ ಆದ್ಮಿ ಪಕ್ಷದಲ್ಲಿ ಸನಾತನ ಸೇವಾ ಸಮಿತಿ ಆರಂಭ: ಬಿಜೆಪಿಯಿಂದ ಬಂದವರಿಗೆ ಹುದ್ದೆಗಳ ಭಾಗ್ಯ;

ದೇವಸ್ಥಾನದ ಅರ್ಚಕರು ಮತ್ತು ಪಂಡಿತರಿಗೆ ಮಾಸಿಕ 18,000 ರೂಪಾಯಿ ಸಹಾಯವನ್ನು ಘೋಷಣೆ;

ಅಸಾದುದ್ದೀನ್ ಓವೈಸಿ ಆಮ್ ಆದ್ಮಿಯ ನಡೆಯ ವಿರುದ್ದ ಟೀಕೆ

ನವದೆಹಲಿ: ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದಲ್ಲಿ ಹೊಸ ಸನಾತನ ಸೇವಾ ಸಮಿತಿಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಇಂದು ಪ್ರಕಟಿಸಿರುವ ಆಡಳಿತಾಧಿಕಾರಿಗಳ ಪಟ್ಟಿಯಲ್ಲಿ ಬಿಜೆಪಿಯಿಂದ ಪಕ್ಷ ಬದಲಾಯಿಸಿದವರಿಗೆ ಸ್ಥಾನ ನೀಡಲಾಗಿದೆ.

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳ ಚುನಾವಣಾ ದಿನಾಂಕಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಚುನಾವಣೆಗೆ ಸ್ವಲ್ಪ ಮೊದಲು, ಆಮ್ ಆದ್ಮಿ ಪಕ್ಷದ ಸನಾತನ ಸೇವಾ ಸಮಿತಿ ಎಂಬ ಹೊಸ ವಿಭಾಗವನ್ನು ಜನವರಿ 8 ರಂದು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ದೆಹಲಿಯ ಹಲವು ಪ್ರಮುಖ ಸಂತರುಗಳಾದ ಸನ್ಯಾಸಿಗಳು, ಆಗತಾಗಳ ಮಹಾಮಂಡಲೇಶ್ವರರು, ಜಗದ್ಗುರುಗಳು ಮತ್ತು ಇತರರು ಭಾಗವಹಿಸಿದ್ದರು.

ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಮಾತನಾಡಿ “ದೇವಾಲಯಗಳ ಪಂಡಿತರು ಮತ್ತು ಅರ್ಚಕರು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅವರು ದೇವರು ಮತ್ತು ಮನುಷ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ, ಅಂತಹ ಜನರ ಸೇವೆಗಾಗಿ ಆಮ್ ಆದ್ಮಿ ಪಕ್ಷವು ಈ ವಿಭಾಗವನ್ನು ಪ್ರಾರಂಭಿಸಿದೆ ಎಂದು ಹೇಳಿದರು

ಇದೇ ಕಾರ್ಯಕ್ರಮದಲ್ಲಿ ಬಿಜೆಪಿಯ ದೇವಸ್ಥಾನ ರಕ್ಷಣೆ ಮತ್ತು ಆಧ್ಯಾತ್ಮಿಕ ವಿಭಾಗದ ಪ್ರಮುಖರು ಉಪಸ್ಥಿತರಿದ್ದರು. ಅವರು ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷ ಸೇರಿದ್ದರು.

ಅವರಲ್ಲಿ ವಿಜಯ್ ಶರ್ಮಾ, ಜಿತೇಂದ್ರ ಶರ್ಮಾ, ಪ್ರಜೇಶ್ ಶರ್ಮಾ, ಮನೀಶ್ ಗುಪ್ತಾ, ದುಶ್ಯಂತ್ ಶರ್ಮಾ ಮತ್ತು ಉದಯಕಾಂತ್ ಝಾ ಸೇರಿದ್ದಾರೆ. ಈ ಮಾಜಿ ಬಿಜೆಪಿ ನಾಯಕರ ಜೊತೆಗೆ, ಆಮ್ ಆದ್ಮಿ ಪಕ್ಷವು ತನ್ನ ಸನಾತನ ಸೇವಾ ಸಮಿತಿಗೆ ಹೊಸ ನಿರ್ವಾಹಕರನ್ನು ಶನಿವಾರ ಘೋಷಿಸಿದೆ.

ಇದರ ದೆಹಲಿ ರಾಜ್ಯ ಕಾರ್ಯಾಧ್ಯಕ್ಷರಾಗಿ ಜಿತೇಂದ್ರ ಶರ್ಮಾ, ಉಪಾಧ್ಯಕ್ಷರಾಗಿ ಸರ್ದಾರ್ ರಾಜೇಂದರ್‌ಸಿಂಗ್, ಸಂಘಟಕರಾಗಿ ಪ್ರಜೇಶ್ ಶರ್ಮಾ ಮತ್ತು ಜಂಟಿ ಕಾರ್ಯದರ್ಶಿಯಾಗಿ ದುಶ್ಯಂದ ಶರ್ಮಾ ಅವರನ್ನು ನೇಮಿಸಲಾಗಿದೆ.

ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅವರು ಇದೇ ಸಮಾರಂಭದಲ್ಲಿ ದೇವಸ್ಥಾನದ ಅರ್ಚಕರು ಮತ್ತು ಪಂಡಿತರಿಗೆ ಮಾಸಿಕ 18,000 ರೂಪಾಯಿ ಸಹಾಯವನ್ನು ಘೋಷಿಸಿದರು.

ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಮ್ ಆದ್ಮಿಯ ನಡೆಯನ್ನು ಟೀಕಿಸಿದ್ದಾರೆ. ಅವರು, ‘ರಾಷ್ಟ್ರೀಯ ಸ್ವಯಂ ಸೇವಕ ಬಿಜೆಪಿ ಮತ್ತು ಆದ್ಮಿ ಪಕ್ಷದ ಮೂಲ ಸಂಸ್ಥೆಯಾಗಿದೆ. ಈ ಎರಡೂ ಪಕ್ಷಗಳು ಹಿಂದುತ್ವದ ಪಕ್ಷಗಳು ಎಂದಿದ್ದಾರೆ‌.

m