ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಇದರ ವತಿಯಿಂದ ಕೊಪ್ಪಳದ ಗಂಗಾವತಿಯಲ್ಲಿ ನಡೆದ ನಾಲ್ಕನೇ ಕವಿ ಕಾವ್ಯ ಸಂಭ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಅಧ್ಯಕ್ಷರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಉಮ್ಮರ್ ಬೀಜದಕಟ್ಟೆಯವರು ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಾಹಿತಿ ಅರಳಿ ನಾಗಭೂಷಣ್ ರವರ 22 ವೈಚಾರಿಕ ಲೇಖನಗಳನ್ನೊಳಗೊಂಡ “ನೂರೆಂಟು ಹೆಜ್ಜೆಗಳು” ಕೃತಿಯನ್ನು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ನಂತರ ಡಾ. ಉಮ್ಮರ್ ಬೀಜದಕಟ್ಟೆಯವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು.

ಕವಿ ಕಾವ್ಯ ಸಂಭ್ರಮದ ಅಧ್ಯಕ್ಷತೆಯನ್ನ ಹಿರಿಯ ಕವಿ ಡಾ. ಜಾಜಿ ದೇವೇಂದ್ರಪ್ಪನವರು ವಹಿಸಿದ್ದರು, ಮತ್ತು ನಾಡಿನ ಹೆಸರಾಂತ ಚಿಂತಕರಾದ ರಂಜಾನ್ ದರ್ಗಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಹಾಸ್ಯ ಚಕ್ರವರ್ತಿ ಅಂತರಾಷ್ಟ್ರೀಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಕೊಟ್ರೇಶ್ ಎಸ್ ಉಪ್ಪಾರ್ ರವರು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ದಿವಾಕರ ನಾರಾಯಣರವರು ಮಾಡಿದರು. ಈ ಸಂದರ್ಭದಲ್ಲಿ ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಮಂಜುನಾಥ ಆರ್ ಹಿರಿಯೂರು, ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಹಸೀನಾ ರವರು ಪಾಲ್ಗೊಂಡಿದ್ದರು.





m

