Featured, ಅಂಕಣ

ಖ್ಯಾತ ಚಲನಚಿತ್ರ ನಿರ್ದೇಶಕ ಹಿಟ್ ಮೇಕರ್ ಶಾಫಿ ವಿಧಿವಶ

 ಜನವರಿ 16 ರಂದು ಪಾರ್ಶ್ವವಾಯುವಿಗೆ ಒಳಗಾದ ನಂತರ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಶಾಫಿ ಅವರನ್ನು ದಾಖಲಿಸಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಅವರು ಜನವರಿ 26 ರಂದು ರಾತ್ರಿ 12.15ಕ್ಕೆ ಕೊನೆಯುಸಿರೆಳೆದರು.56 ವರ್ಷ ವಯಸ್ಸಾಗಿತ್ತು

 ಮಲಯಾಳಂ ಚಿತ್ರರಂಗದ ಹಾಸ್ಯ ಭಂಡಾರದಲ್ಲಿ ಹೆಚ್ಚಾಗಿ ಕಂಡುಬರುವ ಚಲನಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾದ ಮಲಯಾಳಂ ಖ್ಯಾತ ಚಲನಚಿತ್ರ ನಿರ್ದೇಶಕ ಶಾಫಿ.

ಒನ್ ಮ್ಯಾನ್ ಶೋ, ಪುಲಿವಾಲ್ ಕಲ್ಯಾಣಮ್, ಕಲ್ಯಾಣ ರಾಮನ್, ತೋಮ್ಮನು ಮಕ್ಕಳುಮ್, ಮಾಯಾವಿ, ಚಾಕಲೇಟ್, ಚದಿಕಾತ ಚಂದು, ಟು ಕಂಟ್ರಿಸ್ ಸೇರಿದಂತೆ ಹಲವಾರು ಚಿತ್ರ ನಿರ್ದೇಶನ ಮಾಡಿದ್ದಾರೆ.

 ಶಾಫಿ ಅವರ ನಿಜನಾಮ ರಶೀದ್, ಅವರು ಪ್ರಸಿದ್ಧ ಚಿತ್ರಕಥೆಗಾರ ಮತ್ತು ನಿರ್ದೇಶಕ ರಾಫಿ ಅವರ ಕಿರಿಯ ಸಹೋದರ, ಶಾಫಿ ಮತ್ತು ರಾಫಿ ಮಲಯಾಳಂ, ತಮಿಳ್, ಹಿಂದಿ ಚಲನಚಿತ್ರಕಥೆಗಾರ, ನಿರ್ದೇಶಕ, ನಿರ್ಮಾಪಕ ದಿವಂಗತ ಸಿದ್ದಿಕ್ ಅವರ ಸೋದರಳಿಯರು.

ವರದಿ:- ಫಾರೂಖ್ ಕಾನಕ್ಕೊಡ್

m