Featured, ಅಂಕಣ, ಸ್ಥಳೀಯ

(ನಾಳೆ) ಜನವರಿ 30 ರಂದು ಎ ಪಿ ಉಸ್ತಾದ್, ಮಾಣಿ ಉಸ್ತಾದ್ ಸುಳ್ಯಕ್ಕೆ

ಸುಳ್ಯ:- ಜನವರಿ 30 ರಂದು ಗುರುವಾರ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ರವರು ಸುಳ್ಯಕ್ಕೆ ಆಗಮಿಸಲಿದ್ದಾರೆ.

ಸುಳ್ಯದ ಕೇಂದ್ರ ಜುಮಾ ಮಸೀದಿ ಗಾಂಧಿನಗರ ಆಶ್ರಯದಲ್ಲಿ ಮುನವ್ವಿರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಲಿರುವ ಖಾಝಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಖಾಝಿಯಾಗಿ ಸ್ಥಾನ ಅಲಂಕರಿಸಲಿದ್ದಾರೆ.

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಖಾಝಿಯವರಾದ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಖಾಝಿ ಬೈಆತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಗಾಂಧಿನಗರ ಜುಮ್ಮಾ ಮಸೀದಿ ತರ್ಬಿಯತ್ತುಲ್ ಇಸ್ಲಾಂ ಜಮಾಅತ್ ಸಮಿತಿ ಅಧ್ಯಕ್ಷರಾದ ಹಾಜಿ ಕೆ ಎಂ ಮಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಹಿಂದೆ ಖಾಝಿಯಾಗಿದ್ದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ನಿಧನದಿಂದ ಸದ್ರಿ ಸುಳ್ಯ ತಾಲೂಕಿನ ಕೆಲವು ಮೊಹಲ್ಲಾದ ಖಾಝಿ ಸ್ಥಾನ ತೆರವಾಗಿತ್ತು.

m