ಅಂಕಣ, ಇತರೆ, ಸ್ಥಳೀಯ

ಟೀಮ್ ಸುಳ್ಯ ಇನ್ ಬೆಂಗಳೂರು ಇದರ ‘ಮೀಟ್ ದ ಟೀಮ್’ ಅದ್ದೂರಿಯ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬೆಂಗಳೂರು, ಜನವರಿ 31:ಬೆಂಗಳೂರಿನಲ್ಲಿರುವ ಸುಳ್ಯ ತಾಲೂಕಿನವರ ಟೀಮ್ ಸುಳ್ಯ ಇನ್ ಬೆಂಗಳೂರು (TSiB) ಹಲವಾರು ಮಾನವೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಏಳನೇ ವರ್ಷಕ್ಕೆ ಕಾಲಿಡುತ್ತಿದೆ. ಈ ತಂಡದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಅದ್ದೂರಿಯ ‘ಮೀಟ್ ದ ಟೀಮ್’ ಕಾರ್ಯಕ್ರಮವನ್ನು ಆಯೋಜಿಸಲು ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯನ್ನು ಫೆಬ್ರವರಿ 2, ಭಾನುವಾರದಂದು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರೋಡ್‌ನಲ್ಲಿರುವ ಮುರುಗೇಶ್ ಪಾಳ್ಯದ ‘ಹೋಟೆಲ್ ಸಲಾಲ’ದಲ್ಲಿ ನಡೆಸಲಾಗುವುದು ಎಂದು ಟೀಮ್ ಸುಳ್ಯ ಇನ್ ಬೆಂಗಳೂರು ಇದರ ಆಡಳಿತ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

m