Featured, ಅಂಕಣ, ಸ್ಥಳೀಯ

ಕುಂಬರ್ಚೋಡು ಮೊಹಿಯದ್ದೀನ್ ಜುಮ್ಮಾ ಮಸೀದಿ ಸ್ವಲಾತ್ ವಾರ್ಷಿಕ

ಕುಂಬರ್ಚೋಡು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಸ್ವಾಲಾತ್ ವಾರ್ಷಿಕ ಕಾರ್ಯಕ್ರಮವು ಫೆಬ್ರವರಿ 6ರಂದು ಮಸೀದಿಯಲ್ಲಿ ನಡೆಯಿತು ಸ್ವಲಾತ್ ಮಜ್ಜಿಸ್ಗೆ ನೇತೃತ್ವ ನೀಡಿದ ನೂರುಲ್ ಹುದಾ ಮಾಡನ್ನೂರ್ ಇಲ್ಲಿಯ ಉಪನ್ಯಾಸಕರಾದ ಬಹು ಸಿದ್ದಿಕ್ ಹುದವಿ ಯವರು ಧಾರ್ಮಿಕ ಉಪನ್ಯಾಸ ನೀಡಿ ನಾವು ಪ್ರತಿನಿತ್ಯ ದಿಕ್ರ್ ಸ್ವಾಲಾತ್ ಮೂಲಕ ನಮ್ಮ ಹ್ರದಯವನ್ನು ಶುದ್ದಿಗೊಳಿಸುತ್ತಿರಬೇಕು ಸ್ವಲಾತ್ ಮಜಲಿಸ್ ಗಳಲ್ಲಿ ಭಾಗವಹಿಸುತ್ತಿರುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಲ್ಲದೆ ಮಾನಸಿಕ ನೆಮ್ಮದಿಯೊ ಸಿಗುತ್ತದೆ ಎಂದು ಹೇಳಿದರು

ಸ್ಥಳೀಯ ಮಸೀದಿ ಖತಿಬರಾದ ಅಶ್ರಫ್ ಮುಸ್ಲಿಯಾರ್ ದುವಾ ನೆರೆವೇರಿಸಿದರು.ಈ ಸಂದರ್ಭದಲ್ಲಿ ಮಸೀದಿಯ ಮುಹಲ್ಲಿಮ್ ರವೂಫ್ ಆಡೂರು ಮಸೀದಿಯ ಆದ್ಯಕ್ಷರಾದ ಮಹಮ್ಮದ್ ಆಲಿ ಪೆರಾಜೆ  ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಮ್,ಕಾರ್ಯದರ್ಶಿಖಾದರ್ ಅಕ್ಕರೆ ಆಶ್ರಫ್ ಪ್ರಗತಿ ಕರೀಂ ಡಿ ಎಂ ಹನೀಫ್ ಹಾಜಿ ಕೆ ಎಂ ಆಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು ಕೊನೆಯಲ್ಲಿ ಸಿರಣಿ ವಿತರಣೆ ನಡೆಯಿತು.

m