Featured, ಅಂಕಣ, ಸ್ಥಳೀಯ

ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ (ರಿ) ವತಿಯಿಂದ ಉಚಿತ ತಸ್ಬೀಹ್ ಕೌಂಟರ್ ವಿತರಣೆ

ಪುತ್ತೂರು: ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ (ರಿ) ವತಿಯಿಂದ ಪುತ್ತೂರಿನ ಬದ್ರಿಯಾ ಜುಮಾ ಮಸೀದಿ ಹಾಗೂ ಕೇಂದ್ರ ಜುಮಾ ಮಸೀದಿಯಲ್ಲಿ “ಝಿಖ್ರ್ ಎ ರಮದಾನ್” ಎಂಬ ಶೀರ್ಷಿಕೆಯಡಿ ಸುಮಾರು 700 ಉಚಿತ ತಸ್ಬೀಹ್ ಕೌಂಟರ್ ಗಳನ್ನು ವಿತರಿಸಲಾಯಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳರು ದುಆದ ಮೂಲಕ ಚಾಲನೆ ನೀಡಿದರು.

ಸುಮಾರು ವರ್ಷಗಳಿಂದ ತಾಲೂಕಿನಾದ್ಯಂತ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಹಾಯಹಸ್ತವನ್ನು ನೀಡುತ್ತಾ ಬರುತ್ತಿರುವ ಯುವಕರ ತಂಡ ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ಈ ಬಾರಿ ರಮದಾನ್ ನಲ್ಲಿ ವಿನೂತನವಾಗಿ ತಸ್ಬೀಹ್ ಕೌಂಟರ್ ಗಳನ್ನು ಉಚಿತವಾಗಿ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ಜೊತೆ ಕಾರ್ಯದರ್ಶಿಯಾದ ಫಾಝಿಲ್ ಖಾದರ್ ಬನ್ನೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ರಮೀಝ್ ಸಂಪ್ಯ, ಅರ್ಝಾನ್ ಪರ್ಲಡ್ಕ, ಶಾಹಿದ್ ವಿಟ್ಲ, ಯಾಸೀನ್ ಕೋಡಿ, ಅಫ್ರೀದ್ ಕೂರ್ನಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.

m

Related Posts