Featured, ಅಂತರಾಜ್ಯ, ಸ್ಥಳೀಯ

NSUI “ಕ್ಯಾಂಪಸ್ ಜಾಗರಣಾ ಅಭಿಯಾನ” ಆರಂಭ: ಸವಾದ್ ಸುಳ್ಯ ನೇತೃತ್ವದಲ್ಲಿ ಕೇರಳದಲ್ಲಿ ಯುವಜನ ಚಳುವಳಿ;

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ಕ್ಯಾಲಿಕಟ್ ವರೆಗೆ “ಕ್ಯಾಂಪಸ್ ಜಾಗರಣಾ ಅಭಿಯಾನ” ಕಾರ್ಯಕ್ರಮವನ್ನು NSUI (ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ) ಮತ್ತು KSUI (ಕೇರಳ ರಾಜ್ಯ ವಿದ್ಯಾರ್ಥಿ ಒಕ್ಕೂಟ) ಜಂಟಿಯಾಗಿ ಆರಂಭಿಸಿದೆ. ಈ ಅಭಿಯಾನ ಇಂದಿನಿಂದ ಮಾ. 11, ಮಾ. 19ರ ವರೆಗೆ ನಡೆಯಲಿದ್ದು, ಯುವಜನರಲ್ಲಿ ಸಾಮಾಜಿಕ-ರಾಜಕೀಯ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮದ ವೀಡಿಯೋ ಝಲಕ್ ನೋಡಿ ಚಾನಲ್ Subscribe ಮಾಡಿ!!👇

NSUI ರಾಷ್ಟ್ರೀಯ ಸಂಯೋಜಕರಾಗಿ ಮತ್ತು ಕೇರಳದ KSUI ಉಸ್ತುವಾರಿಯಾಗಿ ಈ ಮುನ್ನ ನೇಮಕಗೊಂಡ ಸವಾದ್ ಸುಳ್ಯ ಅವರು ಈ ಅಭಿಯಾನದ ಪ್ರಮುಖ ನೇತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎನ್ಎಸ್ಯೂಐಯ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ ಅವರೊಂದಿಗೆ ಸವಾದ್ ಸುಳ್ಯರವರು ಭಾಗಿಯಾಗಿ, ರಾಜ್ಯಾದ್ಯಂತ ಯುವಪೀಳಿಗೆಯನ್ನು ಒಗ್ಗೂಡಿಸುವ ಪ್ರಮುಖ ತಾತ್ಪರ್ಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಎಸ್ಯೂಐಯ ರಾಜ್ಯಾಧ್ಯಕ್ಷ ಅಲೋಶಿಯಸ್ ಕ್ಸೇವಿಯರ್ ಮತ್ತು ಎನ್ಎಸ್ಯೂಐಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ. ಅನುಲೇಖ ಅವರು ಹಾಜರಿದ್ದು, ಅಭಿಯಾನದ ಸಾಂಸ್ಥಿಕ ಶಕ್ತಿ ಮತ್ತು ಯೋಜನೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡರು.

ಕೇರಳದ ಉತ್ತರ ಭಾಗದ ಕಾಸರಗೋಡು ಮುಂದೆ ದಕ್ಷಿಣದ ಕ್ಯಾಲಿಕಟ್ ವರೆಗಿನ ಕಾಲೇಜುಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳ ಹಕ್ಕುಗಳು, ಶೈಕ್ಷಣಿಕ ಸುಧಾರಣೆ, ಮತ್ತು ಸಾಮಾಜಿಕ ನ್ಯಾಯದಂತಹ ಪ್ರಮುಖ ವಿಷಯಗಳ ಮೇಲೆ ಚರ್ಚೆಗಳು, ಸಂವಾದಗಳು ಮತ್ತು ಪ್ರಚಾರಕಾರ್ಯಗಳು ಈ ಅಭಿಯಾನದ ವಿಶಿಷ್ಟತೆ.

ಸವಾದ್ ಸುಳ್ಯ ಮಾತನಾಡಿ, “ಯುವಜನರು ರಾಜ್ಯ ಮತ್ತು ರಾಷ್ಟ್ರದ ಭವಿಷ್ಯದ ಸ್ತಂಭಗಳು. ಈ ಅಭಿಯಾನದ ಮೂಲಕ ಅವರ ಶಕ್ತಿ ಮತ್ತು ಧ್ವನಿಯನ್ನು ಒಂದುಗೂಡಿಸಲು ನಾವು ಸಂಕಲ್ಪಿತರಾಗಿದ್ದೇವೆ”ಎಂದು ಘೋಷಿಸಿದರು.

ಎನ್ಎಸ್ಯೂಐ-ಕೆಎಸ್ಯೂಐಯ ಈ ಜಂಟಿ ಪ್ರಯತ್ನವು ಕೇರಳದ ಯುವಜನತೆಯನ್ನು ಹೊಸ ದಿಶೆಗೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ.

m

Related Posts