ಪಾಕಿಸ್ತಾನದ ಪೆಶಾವರ್ ನಗರದ ರೇಗಿ ಪ್ರದೇಶದಲ್ಲಿ ವಾಟ್ಸಾಪ್ ಗ್ರೂಪ್ನಿಂದ ಹೊರಹಾಕಿದ್ದಕ್ಕೆ ಪ್ರತೀಕಾರವಾಗಿ ಗುಂಡಿಕ್ಕಿ ಹತ್ಯೆ ಮಾಡಿದ ಆಕ್ರೋಶದ
ನಡೆದಿದೆ. ಮುಷ್ತಾಕ್ ಅಹ್ಮದ್ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರಚಿಸಿದ್ದ ವಾಟ್ಸಾಪ್ ಗ್ರೂಪ್ನ ಅಡ್ಮಿನ್ ಆಗಿದ್ದರು. ಈ ಗ್ರೂಪ್ನ ಸದಸ್ಯರಲ್ಲೊಬ್ಬರಾದ ಅಶ್ಫಾಕ್ ಖಾನ್ ಗ್ರೂಪ್ನಲ್ಲಿ ಅನಗತ್ಯ ಸಂದೇಶಗಳನ್ನು ನಿರಂತರವಾಗಿ ಶೇರ್ ಮಾಡುತ್ತಿದ್ದರಿಂದ ಇತರ ಸದಸ್ಯರಿಗೆ ತೊಂದರೆಯಾಗಿತ್ತು.
ಇದರ ಪರಿಣಾಮವಾಗಿ, ಅಡ್ಮಿನ್ ಮುಷ್ತಾಕ್ ಅವರು ಅಶ್ಫಾಕ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದಾದರೂ, ಅವನು ಇದನ್ನು ಗಮನಿಸದೆ ತನ್ನ ಚಾಳಿ ಮುಂದುವರೆಸಿದದ್ದ.
ಕೊನೆಗೆ, ಅಶ್ಫಾಕ್ನನ್ನು ಗ್ರೂಪ್ನಿಂದ ಹೊರಹಾಕಲಾಯಿತು. ಇದರಿಂದ ಕೋಪಗೊಂಡ ಅಶ್ಫಾಕ್ ಮುಷ್ತಾಕ್ ಅವರೊಂದಿಗೆ ಫೋನ್ ಮೂಲಕ ವಾಗ್ವಾದ ನಡೆಸಿದ ನಂತರ, ಇಬ್ಬರೂ ಸಮಾಧಾನಕ್ಕಾಗಿ ರೇಗಿ ಪ್ರದೇಶದಲ್ಲಿ ಭೇಟಿಯಾದರು.
ಆದರೆ, ವಿವಾದ ಉಲ್ಬಣಗೊಂಡು ಅಶ್ಫಾಕ್ ಪಿಸ್ತೂಲ್ ತೆಗೆದು ಮುಷ್ತಾಕ್ ಅಹ್ಮದ್ ಅವರ ಮೇಲೆ ಗುಂಡು ಹಾರಿಸಿದ್ದು, ಮುಷ್ತಾಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರು ಘಟನೆಯ ವಿವರಗಳನ್ನು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದ ಸಣ್ಣ ಸಮಸ್ಯೆಗಳು ಹಿಂಸಾಚಾರಕ್ಕೆ ದಾರಿ ಮಾಡಿಕೊಡುವುದರ ಅಪಾಯವನ್ನು ಈ ಘಟನೆ ಎತ್ತಿ ತೋರಿಸಿದೆ.




m

