ಪ್ರಜಾಪ್ರಭುತ್ವದ ಯಾವುದೇ ಗೌರವವನ್ನು ಪಾಲಿಸದೆ ಎರಡೂ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಯು ಪಾಸು ಮಾಡಿಸಲಾಗಿದೆ. ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ನೀಡಬೇಕಾದ ಇಲಾಖೆಯೇ ಈ ಮಸೂದೆಯನ್ನು ಮಂಡಿಸಿರುವುದು ಮತ್ತೊಂದು ವಿರೋಧಾಭಾಸವಾಗಿದೆ.
ಭಾರತದಲ್ಲಿ ಪೌರಾಣಿಕವಾಗಿ ಪ್ರತಿಯೊಂದು ಧರ್ಮವು ತನ್ನದೇ ಆದ ಆರಾಧನಾಲಯ ಮತ್ತು ಅನೇಕ ಅನುಬಂಧಗಳನ್ನು ಹೊಂದಿವೆ. ಆದರೆ, ಅಂತಹ ಅನೇಕ ಸ್ವತ್ತುಗಳು ಭ್ರಷ್ಟಕೋರರಿಗೆ ಬಲಿಪಶುವಾಗಲು ಈ ನೂತನ ಮಸೂದೆಯು ಧಾರಾಳವಾಗಿದೆ.
ಅಲ್ಪಸಂಖ್ಯಾತರ ಸಂರಕ್ಷಣೆ ಮತ್ತು ಅವರ ಸುರಕ್ಷತೆಯಾಗಿದೆ ಈ ಮಸೂದೆಯ ಉದ್ದೇಶ ಎಂದು ಸರ್ಕಾರ ಹೇಳುತ್ತಿದೆಯಾದರೂ, ಇದರ ಮೂಲಕ ನಡೆಯಲಿರುವುದೇನೆಂದರೆ ನಿಯಮವಿದೇಯವಾಗಿರುವ ಮುಸ್ಲಿಂ ಆಸ್ತಿಗಳನ್ನು ಕೊಳ್ಳೆಹೊಡೆಯುವುದಾಗಿದೆ.
ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗಳಲ್ಲಿ ತೀರ್ಪು ನೀಡಬೇಕಾದ ವಕ್ಫ್ ಬೋರ್ಡಿನಲ್ಲಿ ಮುಸ್ಲಿಂ ಪಂಡಿತರಿಗೆ ಯಾವುದೇ ಸ್ಥಾನವಿಲ್ಲದೆ ಮುಸ್ಲಿಮೇತರ ಸದಸ್ಯರನ್ನು ಸದಸ್ಯರನ್ನಾಗಿ ನೇಮಕ ಮಾಡಿ, ಒಂದು ಆಸ್ತಿಯ ಒಡೆತನವನ್ನು ನಿರ್ಣಯಿಸಲು ಇರುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡುತ್ತಿರುವ ಈ ಬಿಲ್ಲಿನ ಮುಸ್ಲಿಮರಿಗೆ ಯಾವ ರೀತಿಯ ಸಂದೇಶವನ್ನಾಗಿದೆ ನೀವು ನೀಡುವುದು?
ಕಾಂಗ್ರೆಸ್ ನೇತೃತ್ವದಲ್ಲಿರುವಂತಹ I N D I A ಸಖ್ಯವು ಒಂದುಗೂಡಿ ಸುಮಾರು ಹದಿನಾರು ಗಂಟೆಗಳ ಕಾಲ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ನೀಡುವ ಮೂಲಕ ಒಂಟಿ ಕಾಲಲ್ಲಿ ನಿಲ್ಲಿಸುವುದರ ಮೂಲಕ ಜಾತ್ಯತೀತ ವಿಶ್ವಾಸಿಗಳಿಗೆ ದೊಡ್ಡದಾದ ಸಂದೇಶವನ್ನು ನೀಡಿದೆ.
ಸಂವಿಧಾನದ ಮೌಲ್ಯಗಳನ್ನು ಧೂಳಿಪಟಗೊಳಿಸಿ ರಾಜ್ಯದ ಜನತೆಯನ್ನು ವಿಭಜನೆ ಮಾಡುವ ಫ್ಯಾಸಿಸ್ಟ್ ಸಿದ್ಧಾಂತಗಳಿಗೆ ವಿರುದ್ಧವಾಗಿ ಪ್ರಜಾಪ್ರಭುತ್ವ ವಿಶ್ವಾಸಿಗಳು ಒಗ್ಗಟ್ಟಾಗಿ ಕೆಲಸ ಮಾಡಲು ಇನ್ನೂ ಕೂಡ ವಿಳಂಬ ಮಾಡಬಾರದು.
“ಅವರು ಎಂತಹ ಹೇಯ ಕೆಲಸ ಮಾಡಿದರು! ಅವರು ನಂಬಿಕೆಯುಳ್ಳವರ ಕಡೆಗೆ ನಿಕಟ ಸಂಬಂಧಗಳನ್ನು ಅಥವಾ (ಸಾಂವಿಧಾನಿಕ) ಜವಾಬ್ದಾರಿಗಳನ್ನು ಹೊಂದಿರುವುದಿಲ್ಲ. ಅವರು ಅತಿಕ್ರಮಿಗಳು”
(ಕುರಾನ್ -9:9,10 ನೋಡಿ).
ಆಶಿಕ್ ನಲ್ವತ್ತೆಕರೆ,ಕೊಡಗು
(ದ್ವಿತೀಯ ಪದವಿ ವಿದ್ಯಾರ್ಥಿ, ಶಂಸುಲ್ ಉಲಮಾ ಅರೆಬಿಕ್ ಕಾಲೇಜು , ತೋಡಾರು)