Featured, ರಾಜ್ಯ

ದಾವಣಗೆರೆ: ಕಳ್ಳತನದ ಆರೋಪದ ಮೇಲೆ ಬಾಲಕನಿಗೆ ಕ್ರೂರ ಹಲ್ಲೆ – ಗುಪ್ತಾಂಗಕ್ಕೆ ಕೆಂಪು ಇರುವೆ ಬಿಟ್ಟ ಕಿಡಿಗೇಡಿಗಳು; ಘಟನೆಯ ವೀಡಿಯೋ ವೈರಲ್

ದಾವಣಗೆರೆ: ಕಳ್ಳತನದ ಆರೋಪದ ಮೇಲೆ ಬಾಲಕನಿಗೆ ಕ್ರೂರ ಹಲ್ಲೆ – 

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ್ ಬಳಿಯ ಅಸ್ತಾಪನಹಳ್ಳಿಯಲ್ಲಿ ಒಂದು ಕ್ರೂರ ಘಟನೆ ನಡೆದಿದ್ದು, ಈಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಒಬ್ಬ ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಲ್ಲದೆ, ಅವನ ಗುಪ್ತಾಂಗಗಳಿಗೆ ಕೆಂಪು ಇರುವೆಗಳನ್ನು ಬಿಟ್ಟು ಚಿತ್ರಹಿಂಸೆ ನೀಡಲಾಗಿತ್ತು.

ಈ ಘಟನೆಯಲ್ಲಿ ಹಕ್ಕಿ-ಪಿಕ್ಕಿ ಸಮುದಾಯದ 10 ರಿಂದ 15 ಜನ ಯುವಕರು ಅದೇ ಸಮುದಾಯದ ಬಾಲಕನ ಮೇಲೆ ದಾಳಿ ಮಾಡಿದ್ದರು. ದೊಣ್ಣೆ ಮತ್ತು ಡ್ರಿಪ್ ಪೈಪ್ ಬಳಸಿ ಕ್ರೂರವಾಗಿ ಹೊಡೆದಿದ್ದರ ಜೊತೆಗೆ, ಬಾಲಕನನ್ನು ಬಲವಂತವಾಗಿ ನಗ್ನ ಮಾಡಿ ಇರುವೆಗಳನ್ನು ಬಿಡಲಾಗಿತ್ತು. ಬಾಲಕನು ನೋವಿನಿಂದ ಅತ್ತುಕೊಂಡು ಚೀರಾಡುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿವೆ.

ಈ ಘಟನೆ ಕೆಲ ತಿಂಗಳ ಹಿಂದೆ ನಡೆದಿದ್ದಾದರೂ, ಇದರ ವಿಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಡಲು ಪ್ರಾರಂಭವಾಗಿದೆ.

ಅಸ್ತಾಪನಹಳ್ಳಿ ಗ್ರಾಮದ ದರ್ಶನ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ. ಬಳಿಕ ಬಾಲಕನನ್ನು ಹಿಡಿದು ಅಡಕೆ ತೋಟಕ್ಕೆ ಕರೆದೊಯ್ದು ಹಲ್ಲೆ‌ ಮಾಡಲಾಗಿದೆ. ಕಳ್ಳತನಕ್ಕೆ ಸಹಕರಿಸಿದ್ದ ಇನ್ನೊಬ್ಬ ಬಾಲಕನಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಹಲ್ಲೆಗೈದ ಹತ್ತು ಜನರ ಪೈಕಿ ನಾಲ್ವರು ಅಪ್ರಾಪ್ತರು. ಸುಭಾಷ್ (23), ಲಕ್ಕಿ(21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು(20), ಭೂಣಿ (18), ಸುಧನ್ ಅಲಿಯಾಸ್ ಮಧುಸೂಧನ್ ವಿರುದ್ದ ಕೇಸ್ ದಾಖಲಾಗಿದೆ.

ಹಲ್ಲೆಗೆ ಗುರಿಯಾದ ಬಾಲಕನ ತಾತನ ದೂರಿನ ಆಧಾರದ ಮೇಲೆ ಪೊಲೀಸರು 9 ಜನ ಯುವಕರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಇದರಲ್ಲಿ ಇಬ್ಬರನ್ನು ಇದುವರೆಗೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

m

Davangere | A boy was tied to a tree and left in the forest to be looted