Featured, ಅಂಕಣ, ಸ್ಥಳೀಯ

ಕೇಂದ್ರ ಸರಕಾರ ಮುಸ್ಲಿಂ ಸಮುದಾಯಕ್ಕೆ ವಖ್ಫ್ ಕಾನೂನಿನಲ್ಲಿ ಹಾಗು ವಿದ್ಯಾರ್ಥಿನಿಯರ ಸ್ಕಾಲರ್ಷಿಪ್ ನೀಡುವುದರಲ್ಲಿ ಅನ್ಯಾಯ ಮಾಡಿದೆ ಟಿ ಎಂ ಶಾಹಿದ್ ತೆಕ್ಕಿಲ್

ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಮಜ್ಲಿಸ್ ನೂರ್ ಕಾರ್ಯಕ್ರಮ ಕಲ್ಲುಗುಂಡಿ ಮಸೀದಿ ವಠಾರದಲ್ಲಿ ಮಸೀದಿ ಅಧ್ಯಕ್ಷರಾದ ಜನಾಬ್ ಆಲಿ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಖತೀಬ್ ಬಹು ನಾಸಿರ್ ದಾರಿಮಿ ನೇರವೇರಿಸಿದರು ಸ್ವಲಾತ್ ವಾರ್ಷಿಕ ಮಜ್ಲಿಸ್,ನೂರ್ ಕಾರ್ಯಕ್ರಮ ದುವ ನೇತೃತ್ವ ಅಲ್ ಹಾಜ್ ಸಯ್ಯದ್ ಜೈನುಲ್ ಆಬಿದೀನ್ ತಂಗಲ್ ನೇತೃತ್ವ ನೀಡಿ ಮುಸ್ಲಿಂ ಸಮುದಾಯದ ಇಸ್ಲಾಂ ಮತ್ತು ಇಮಾನಿನ ಭಾಗವನ್ನು ಅದರ ಸೂಕ್ಷ್ಮತೆಯನ್ನು ವಿವರಿಸಿ ಕಟ್ಟುನಿಟ್ಟಿನ ಶಿಸ್ತು ಸಂಯಮ ಹಾಗು ದೀನಿ ಚೌಕಟ್ಟಿನ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು ಪೇರಡ್ಕ ಮೋಹಿದ್ದಿನ್ ಜುಮಾ ಮಸೀದಿಯ ಅಧ್ಯಕ್ಷರಾದ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ , ರವರು ಮಾತನಾಡಿ ಕಲ್ಲುಗುಂಡಿ ಜುಮಾ ಮಸೀದಿ ನೇತೃತ್ವದಲ್ಲಿ ಪಾತಿಮಾ ಮಹಿಳಾ ಶರಿಯತ್ ಕಾಲೇಜ್ ಬಹಳ ಉತ್ತಮವಾಗಿ ನಡೆಯುತಿದೆ,ಇಲ್ಲಿ ಮಹಿಳಾ ಶರಿಯತ್ ಕಲಿತ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಉತ್ತಮವಾಗಿ ಬೆಳೆಯುವ ಮೂಲಕ ಕಲ್ಲುಗುಂಡಿ ಜಮಅತ್ ಮಾದರಿಯ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒಳ್ಳೆಯ ಕೆಲಸ ಮಾಡಿದೆ ಎಂದು ಅಭಿನಂದಿಸಿದರು,ಕೇಂದ್ರ ಸರಕಾರ ವಕ್ಫ್ ಕಾನೂನು ತಿದ್ದು ಪಡಿ ಮಾಡುವ ಮೂಲಕ,ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ, ಮಹಿಳಾ ವಿದ್ಯಾರ್ಥಿಗಳ ಸ್ಕಾಲರ್ಷಿಪ್ ನಿಲ್ಲಿಸಿದ ಕೇಂದ್ರ ಸರಕಾರ ವಖ್ಫ್ ವಿಷಯದಲ್ಲಿ ಸಂಪೂರ್ಣ ಸುಳ್ಳು ಮಾಹಿತಿ ನೀಡಿ ಮುಸ್ಲಮಾನರನ್ನು ಕೀಳಾಗಿ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು,ಈ ದೇಶದಿಂದ ಮುಸಲ್ಮಾನರನ್ನು ಪ್ರತ್ಯೆಕಿಸುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಆದರೆ ಮುಸ್ಲಿಂ ಸಮುದಾಯದ ದೇಶದ ಅಭಿವೃದ್ಧಿ ಮಾತ್ರ ಚಿಂತಿಸುತ್ತಿದೆ ಎಂದರು. ಗೂನಡ್ಕ ಜುಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ. ಕೆ .ಹಮೀದ್ ಗೂನಡ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೊಯ್ನಾಡ್ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಎಸ್ ಮೊಯ್ದೀನ್ ಖತೀಬ್ ಕೆ. ಯು ಮಹಮದ್ ಸಖಾಫಿ ಅಲ್ ಹಿಕಮಿ, ಸಂಪಾಜೆ ಬದ್ರ್ ಜುಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಹಮೀದಿಯ, ಖತೀಬ್ ಉಸ್ತಾದ್ ಲುಕುಮಾನುಲ್ ಹಕೀಂ ಫೈಝಿ ಸಂಪಾಜೆ ಫೈಝಲ್ ಝುಹರಿ ಉಸ್ತಾದ್ ಸಂಪಾಜೆ ಸದರ್ ಉಸ್ತಾದ್ ಅಬ್ದುಲ್ ಹಕೀಂ ಜಲಾಲಿ ಸುಳ್ಯ ತಾಲೂಕು ಮದ್ರಸಾ ಮೆನೆಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ ಸೀರಾಜುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ರಾದ ಇಬ್ರಾಹಿಂ ಎ ,ಕೆ. ಅಬೂಬಕ್ಕರ್ ಸೂಪರ್ ಕಲ್ಲುಗುಂಡಿ ಜುಮಾ ಮಸೀದಿಯ ಉಪಾಧ್ಯಕ್ಷರಾದ ಅಶ್ರಫ್ ಕೆ.ಎಂ ಕಾರ್ಯದರ್ಶಿ ಇರ್ಶಾದ್ ಬದ್ರಿಯಾ, ಸಾದಿಕ್ ಉದಯ ಸ್ಟೋರ್, ಸಾಜಿದ್ ಅಜಹರಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ನೇತಾರರು ಉಪಸ್ತಿತರಿದ್ದರು

m

Related Posts