ದಿಕ್ರ್ ಸ್ವಲಾತ್ ಸಮಿತಿ ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಆಶ್ರಯದಲ್ಲಿ ಅರಂತೋಡು ಜುಮಾ ಮಸೀದಿಯಲ್ಲಿ 35 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ ಅಗಲಿದ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರ 6 ನೇ ವರ್ಷದ ಪುಣ್ಯಸ್ಮರಣೆ ಹಾಗೂ 21 ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಿಲಿಸ್ ಕಾರ್ಯಕ್ರಮವು ಎ. 24 ರಂದು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ದಿಕ್ರ್ ಸ್ವಲಾತ್ ನ ನೇತೃತ್ವವನ್ನು ಸಯ್ಯದ್ ಅಲ್ ಹಾಜ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕರವರು ವಹಿಸಿ ಮಾತನಾಡಿ, ಅರಂತೋಡು ದಿಕ್ರ್ ಸ್ವಲಾತ್ ಸಮಿತಿಯವರು ಉತ್ತಮ ಕೆಲಸವನ್ನು ಮಾಡುತ್ತಿದೆ, ಸ್ವಲಾತ್ ನಿಂದ ಸಂಗ್ರಹವಾದ ಹಣವು ಬೇರೆ ಯಾವುದೆ ಉದ್ದೇಶಕ್ಕೆ ವಿನಿಯೋಗವಾಗದೆ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ವಿವಾಹಕ್ಕೆ ಬಳಕೆಯಾಗುತ್ತಿರುವುದು ಶ್ಲಾಘನೀಯ ಬಡ ಮತು ಅನಾಥರಿಗೆ ಸಹಾಯ ಮಾಡಬೇಕು. ಅವರ ಬಗ್ಗೆ ಕಾರುಣ್ಯ ತೋರಿಸಿದರೆ ಮಾತ್ರ ಸ್ವರ್ಗ ಪ್ರಾಪ್ತಿ. ಕುಟುಂಬ ಮತ್ತು ನೆರೆಹೊರೆಯವರೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವವ ಸ್ವರ್ಗ ಪ್ರವೇಶಿಸಲಾರ ಎಂದರು. ಅರಂತೋಡು ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿ ಅನುಸ್ಮರಣಾ ಭಾಷಣವನ್ನು ಮಾಡಿದರು.
ಸದರ್ ಜಿ.ಕೆ ಅಶ್ರಫ್ ಮುಸ್ಲಿಯಾರ್ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷ ಕೆ.ಎಂ ಇಬ್ರಾಹಿಂ ಬಿಳಿಯಾರು, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಮ್ ಅಬ್ದುಲ್ ಮಜೀದ್, ಸಂಶುದ್ದೀನ್ ಕೆ.ಎ.ಯು, ನೌಶಾದ್ ಅಝ್ಹರಿ,ಅರ್ಷಾದ್ ಬಾಕವಿ, ಎಸ್.ಕೆ ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ದುಬೈ ಸಮಿತಿ ಅಧ್ಯಕ್ಷ ಮುಕ್ತಾರ್ ಪಠೇಲ್, ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಠೇಲ್, ಕೆ.ಎಂ ಮೊಯಿದು ಕುಕ್ಕುಂಬಳ, ಎ. ಹನೀಫ್, ಸಂಶುದ್ಧೀನ್ ಪೆಲ್ತಡ್ಕ , ಮನ್ಸೂರ್ ಪಾರೆಕ್ಕಲ್, ಮುಜೀಬ್ ಅರಂತೋಡು, ಹಾಜಿ ಅಝರುದ್ದೀನ್, ಟಿ.ಎಂ ಜಾವೇದ್ ತೆಕ್ಕಿಲ್, ಹಾಜಿ ಅಬ್ದುಲ್ ರಜಾಕ್ ಅಡಿಮರಡ್ಕ, ಹಾಜಿ ಅಹ್ಮದ್ ಸುಪ್ರಿಮ್, ಹಾಜಿ ಅಹಮ್ಮದ್ ಪಾರೆ, ಹಮೀದ್ ಹಾಜಿ ಸುಳ್ಯ, ಕೆ.ಎಂ ಉಸ್ಮಾನ್, ಅಬ್ದುಲ್ಲ ಮಾಸ್ತರ್, ಸೂಫಿ, ಸಂಶುದ್ಧೀನ್ ಕ್ಯೂರ್, ಮುಬಾರಕ್ ಸೆಂಟ್ಯಾರ್ ¸ ಆರಿಫ್ ದರ್ಖಾಸ್ ಮೊದಲಾದವರು ಉಪಸ್ಥಿತರಿದ್ದರು.




m
