ವಿದ್ಯುತ್ ಶಾಕ್ ಹೊಡೆದು ಆಟೋ ಚಾಲಕರೊಬ್ಬರು ದಾರುಣ ವಾಗಿ ಮೃತಪಟ್ಟ ಘಟನೆ ಅರಂತೋಡು ಸಮೀಪದ ಬಿಳಿಯಾರಿನಿಂದ ಇದೀಗ (ಮೇ11) ರಾತ್ರಿ ವರದಿಯಾಗಿದೆ. ಪುರುಷೋತ್ತಮ (55) ಮೃತ ಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ಆಟೋ ಚಾಲಕರಾಗಿರುವ ಅವರು ಟ್ರಿಪ್ಪರ್ ಚೇಂಜ್ ಮಾಡುವ ಸಂದರ್ಭ ದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ಹೇಳಿವೆ. ಅವರನ್ನು ಕೂಡಲೇ ಸುಳ್ಯದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ.




m
