ಹನ್ನೊಂದು ಸಾವಿರ ಮದ್ರಸಗಳಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸಮಸ್ತ ವಿದ್ವಾಂಸ ಸಂಘಟನೆ ಸಮಾಜಕ್ಕೆ ಉತ್ತಮ ಜಾಗೃತಿ ಸಂದೇಶ ನೀಡಿದೆ” ಎಂದರು : ಎಸ್ ಬಿ ಮುಹಮ್ಮದ್ ದಾರಿಮಿ
ಪುತ್ತೂರು : ಮಾಡನ್ನೂರ್
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಕಾರ್ಯಾಚರಿಸುವ ಮಾಡನ್ನೂರ್ ರೇಂಜಿಗೋಳಪೆಟ್ಟ ನೂರುಲ್ ಇಸ್ಲಾಂ ಸೆಕೆಂಡರಿ ಕೇಂದ್ರ ಮದ್ರಸ ಮಾಡನ್ನೂರ್ SKSBV ವತಿಯಿಂದ ಗ್ರಾಂಡ್ ಅಸೆಂಬ್ಲಿ ಹಾಗೂ ಬ್ರಹತ್ ಮಾದಕ ವಿರುದ್ಧ ಅಭಿಯಾನ ನಡೆ ಯಿತು. ಮಾಡನ್ನೂರ್ ಖತೀಬ್ ಉಸ್ತಾದ್ ಅಲ್ ಹಾಜ್ ಎಸ್ ಬಿ ಮುಹಮ್ಮದ್ ದಾರಿಮಿ ದುಆ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ವರ್ತಮಾನ ಕಾಲದಲ್ಲಿ ಮಾದಕ ವಸ್ತುಗಳ ಬಳಕೆ ವಿವಿಧ ರೀತಿಯಲ್ಲಿ ಇದೆ. ಸಣ್ಣ ಮಕ್ಕಳಿಗೆ ಚಾಕೊಲೇಟ್ ರೂಪದಲ್ಲಿ ಕೂಡ ಮಾದಕ ವಸ್ತುಗಳನ್ನು ನೀಡಿ ದಾರಿ ತಪ್ಪಿಸಲಾಗುತ್ತಿದೆ.
ವಿದ್ಯಾರ್ಥಿಗಳು, ಯುವಕರು ಇದರ ಬಲಿ ಪಶುಗಳಾಗಿದ್ದು ವ್ಯಾಪಾರ ಮನೋಭಾವದ ಸಮಾಜ ದ್ರೋಹಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡಿ ಲಕ್ಷಾಂತರ ಹಣ ಗಳಿಸುವ ದುರುದ್ದೇಶದಿಂದ ಅವುಗಳ ಮಾರಾಟ ಮಾಡುವುದರೊಂದಿಗೆ ಬೆಳೆದು ಬರುತ್ತಿರುವ ಮಕ್ಕಳು ಮತ್ತು ವಿದ್ಯಾರ್ಥಿ ಯುವ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಆದ್ದರಿಂದ ನಮಗೆ ಪರಿಚಯ ಇಲ್ಲದ ಯಾವುದೇ ವಸ್ತುಗಳನ್ನು ಖರೀದಿಸುವಾಗ ಜಾಗ್ರತೆ ವಹಿಸಬೇಕು. ಹನ್ನೊಂದು ಸಾವಿರ ಮದ್ರಸಗಳಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸಮಸ್ತ ವಿದ್ವಾಂಸ ಸಂಘಟನೆ ಸಮಾಜಕ್ಕೆ ಉತ್ತಮ ಜಾಗೃತಿ ಸಂದೇಶ ನೀಡಿದೆ” ಎಂದರು

.ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಬುಶ್ರ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿ ಮಾತನಾಡಿ ” ಸಮಾಜಕ್ಕೆ ಮಾರಕವಾಗಿರುವ ಮಾದಕ ವ್ಯಸನ ಇಡೀ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡಿದೆ. ಇದರ ಚಟಕ್ಕೆ ಬಿದ್ದವರು ಕೊಲೆ,ಹಲ್ಲೆ,ದರೋಡೆ ಸಹಿತ ಎಲ್ಲಾ ಅಕ್ರಮಗಳನ್ನು ನಡೆಸಿ ನಾಡಿನಲ್ಲಿ ಭಯಾನಕ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದರ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂದು ಹೇಳಿದರು. ಸದರ್ ಉಸ್ತಾದ್ ಅಲ್ ಹಾಜಿ ಅಬೂಬಕರ್ ಸಿದ್ದಿಕ್ ಫೈಝಿ ಪ್ರತಿಜ್ಞೆ ಬೋಧಿಸಿದರು. ಸಭೆಯಲ್ಲಿ ಜಮಾತ್ ಪ್ರದಾನ ಕಾರ್ಯದರ್ಶಿ ಬಿ ಯಮ್ ಅಬ್ದುಲ್ಲಾ ಚಾಲ್ ಕೆರೆ , ಮದ್ರಸ ಉಸ್ತುವಾರಿಗಳಾದ ಝುಬೈರ್ ಕೊಳಂಬೆ ಹಾಗೂ ಶರೀಫ್ ಅಂಗಡಿ, ಮದ್ರಸ ಅದ್ಯಾಪಕರಾದ ಅಲ್ ಹಾಜಿ ಇಬ್ರಾಹಿಂ ಝುಹ್‌ರಿ ಕುಂಬ್ರ, ತಾಜುದ್ದೀನ್ ಸಅದಿ ಅಲ್ ಹುಮೈದಿ, ಇಬ್ರಾಹಿಂ ಸಅದಿ ಮಾಡನ್ನೂರ್, ಶುಹೈಲ್ ದಾರಿಮಿ ಮಾಡನ್ನೂರ್ ಹಾಗೂ ಹಳೆ ವಿದ್ಯಾರ್ಥಿ ಬಾಝಿಲ್ SKSBV ಅಧ್ಯಕ್ಷ ಇರ್ಫಾನ್ ಕಾರ್ಯದರ್ಶಿ ಮಸ್ ವೂದ್ ಕೋಶಾಧಿಕಾರಿ ರಾಫಿಹ್ ಹಾಗೂ ಸದಸ್ಯರು ಹಾಗೂ ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡರು.




m

