ಇತ್ತೀಚೆಗೆ ದುಷ್ಕರ್ಮಿಗಳು ಕೊಲೆಗೈದ ಅಮಾಯಕ SKSSF ಕಾರ್ಯಕರ್ತ ಕೊಲ್ತಮಜಲ್ ಜಮಾಅತ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರವರ ಅನುಸ್ಮರಣೆ ಮಳಲಿ ಮಸೀದಿ ವಠಾರ ಸಹಚಾರಿ ಆಫೀಸಿನಲ್ಲಿ ನಡೆಯಿತು. ಮಳಲಿ ಯುನಿಟ್ ಅಧ್ಯಕ್ಷರಾದ ಇಕ್ಬಾಲ್ ಬಿ.ಜಿ ಯವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಮದರಸ ಸದರ್ ಮುಅಲ್ಲಿಂ ಅನುಸ್ಮರಣೆ ಹಾಗು ಕೂಟು ಪ್ರಾರ್ಥನೆಗೆ ನೇತೃತ್ವ ನೀಡಿದರು.ಅಬ್ದುಲ್ ಅಝೀಝ್ ಮುಲ್ಲಗುಡ್ಡೆ ಸ್ವಾಗತಿ ವಂದಿಸಿದರು.ಜಮಾಅತ್ ಅಧ್ಯಕ್ಷರಾದ ಅಬ್ದು ರಝಾಕ್ ಮಳಲಿ,ಪ್ರಧಾನ ಕಾರ್ಯದರ್ಶಿ ನವಾಝ್ ಎಂ.ಎಚ್,ಇರ್ಶಾದುಲ್ ಮುಸ್ಲಿಮೀನ್ ಅಧ್ಯಕ್ಷರಾದ ಎಂ ಎ ಮುಹಮ್ಮದ್, ಗ್ರೀನ್ ಸ್ಟಾರ್ ಅಧ್ಯಕ್ಷರಾದ ಅನ್ಸಾರ್ ಮಳಲಿ,ಜಮಾಅತ್ ಜೊತೆ ಕಾರ್ಯದರ್ಶಿ ಹಮೀದ್ ಮುಲ್ಲಗುಡ್ಡೆ,ಮದರಸ ಅಧ್ಯಾಪಕರಾದ ಮುಹಮ್ಮದ್ ಯಮಾನಿ,ಸಿರಾಜುದ್ದೀನ್ ಅಝ್ಹರಿ,ಮುಸ್ತಫಾ ಅರ್ಶದಿ,SKSSF ಪ್ರಧಾನ ಕಾರ್ಯದರ್ಶಿ ನೌಫಲ್ ಮಳಲಿ ಮುಂತಾದವರು ಭಾಗವಹಿಸಿದರು.





m
