Featured, ಇತರೆ, ಸ್ಥಳೀಯ

ಬೀದಿ ನಾಯಿಗಳ ಹಾವಳಿಗೆ ಬ್ರೇಕ್: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತುರ್ತು ನಿರ್ದೇಶನ

ದೆಹಲಿ, ಆ.11: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಬೀದಿ ನಾಯಿಗಳ ಹಾವಳಿ ಕುರಿತಾಗಿ ಸುಪ್ರೀಂ ಕೋರ್ಟ್ ಗಂಭೀರವಾಗಿ ಗಮನಹರಿಸಿದೆ.
‘ವ್ಯಾಪಕಗೊಂಡ ಅವ್ಯವಸ್ಥೆ’ ಎಂದು ಶ್ವಾನ ದಾಳಿಗಳಿಗೆ ತೀವ್ರ ಭಾವನೆ ವ್ಯಕ್ತಪಡಿಸಿರುವ ನ್ಯಾಯಾಲಯ, ದೆಹಲಿ ಸರ್ಕಾರ ಹಾಗೂ ಮಹಾನಗರ ಪಾಲಿಕೆಗೆ ಇಂದು ಮಹತ್ವದ ನಿರ್ದೇಶನ ನೀಡಿದೆ.
“ನಗರದಲ್ಲಿ ಹೆಚ್ಚುತ್ತಿರುವ ಶ್ವಾನ ದಾಳಿಗಳು ಅತ್ಯಂತ ಭೀಕರವಾಗಿದೆ. ಜನಸುರಕ್ಷೆಗೆ ಇದು ತೀವ್ರ ಆತಂಕ ಉಂಟುಮಾಡುವ ವಿಚಾರ. ಆದ್ದರಿಂದ ದೆಹಲಿಯಲ್ಲಿರುವ ಎಲ್ಲ ಬೀದಿ ನಾಯಿಗಳನ್ನು ಶೀಘ್ರದಲ್ಲೇ ಹಿಡಿದು ಶ್ವಾನ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕು,” ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಕುರಿತಂತೆ ತುರ್ತು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದ್ದು, ದೆಹಲಿ ಸರ್ಕಾರದಿಂದ ಶೀಘ್ರ ವರದಿ ನೀಡಿ ಸಂಬಂಧಿತ ಕ್ರಮಗಳ ವಿವರ ನೀಡುವಂತೆ ಸೂಚಿಸಲಾಗಿದೆ.

m