ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸ ವತಿಯಿಂದ ಸಮಸ್ತ ಸ್ಥಾಪನಾ ದಿನದ ಅಂಗವಾಗಿ ಮದರಸದಲ್ಲಿ ಪ್ರಾರ್ಥನಾ ದಿನಾಚರಣೆ ಆಚರಿಸಲಾಯಿತು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಪ್ರಾರ್ಥನಾ ಸಂಗಮಕ್ಕೆ ನೇತ್ರತ್ವ ನೀಡಿದರು.

ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ರಫೀಕ್ ಹಾಜಿ ನೇರಳಕಟ್ಟೆ ಶುಭ ಹಾರೈಸಿದರು. ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ, ಸದಸ್ಯ ಫಾರೂಕ್ ಗೋಳಿಕಟ್ಟೆ ಮದ್ರಸ ಶಿಕ್ಷಕರಾದ ರಶೀದ್ ಅಝ್ಅರಿ, ಮಕ್ಬೂಲ್ ಫೈಝಿ ಅಲ್ ಮಅಬರಿ, ಇಬ್ರಾಹಿಂ ಬಾತಿಷಾ ಇರ್ಫಾನಿ, ಅಶ್ರಫ್ ಯಮಾನಿ, ಹಾರಿಸ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು .

ಮದ್ರಸ ಮುಖ್ಯ ಶಿಕ್ಷಕ ಶಿಹಾಬುದ್ದೀನ್ ಫೈಝಿ ಅಲ್ ಮಅಬರಿ ಪ್ರಾರ್ಥನಾ ದಿನದ ಔಚಿತ್ಯದ ಬಗ್ಗೆ ವಿವರಿಸಿ, ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಸಮಸ್ತದ ತಹಿಯ್ಯಾ ಫಂಡ್ ಗೆ ಮಸೀದಿ ಅದ್ಯಕ್ಷ ಅಬ್ಬಾಸ್ ನೇರಳಕಟ್ಟೆ ಪ್ರಥಮ ದೇಣಿಗೆ ನೀಡಿದರು.




m
