ಪೆರಾಜೆ: ಉಳಿಯ ಪಯಸ್ವಿನಿ ನದಿಗೆ ಪ್ರಾಣಿ ತ್ಯಾಜ್ಯ ಎಸೆದ ದುರುಳರು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಸುಳ್ಯ: ಪೆರಾಜೆ ಉಳಿಯ (ಉತ್ತರ ಕೊಡಗು) ಸಮೀಪದ ಪೆರಾಜೆ ಕಾಸ್ಪಡಿ ಶ್ರೀ ಶಾಸ್ತವು ದೇವಸ್ಥಾನ ರಸ್ತೆಯ ಬಳಿ ಇರುವ ಸೇತುವೆಯ ಕೆಳಗೆ ಹರಿಯುವ ಪಯಸ್ವಿನಿ ನದಿಗೆ ಹಳಸಿದ ಪ್ರಾಣಿ ಮಾಂಸ ತ್ಯಾಜ್ಯವನ್ನು ಯಾರೋ ದುರುಳರು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ನದಿಯ ನೀರಿನಲ್ಲಿ ತೇಲುತ್ತಿದ್ದ ಪ್ರಾಣಿ ಮಾಂಸ ತ್ಯಾಜ್ಯದಿಂದ ತೀವ್ರ ದುರ್ವಾಸನೆ ಹರಡುತ್ತಿದ್ದು, ಪರಿಸರ ಮಾಲಿನ್ಯ ಉಂಟಾಗಿದೆ. ನದಿಯ ನೀರನ್ನು ಮನೆ ಬಳಕೆ ಹಾಗೂ ಇತರ ಅಗತ್ಯಗಳಿಗೆ ಬಳಸುವ ಜನರಿಗೆ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿ ಎದುರಾಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಂಚಾಯತ್ ಆಡಳಿತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ನದಿಗೆ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ



Scroll To Top