Featured, ಇತರೆ

ಸುಳ್ಯ: ಮೃತ ವಿವಾಹಿತೆ ನಿಶಾನ ಮನೆಗೆ ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ನಿಯೋಗ ಭೇಟಿ; ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲದ ಭರವಸೆ

ಸುಳ್ಯ, ಜು.23: ಸಂಪಾಜೆ ಗ್ರಾಮದ ಕಲ್ಲುಗುಂಡಿ ಕಡಪಾಲ ನಿವಾಸಿ ಅನ್ಸಾರ್ ಅವರ ಪತ್ನಿ, ಮೃತ ಫಾತಿಮತ್ ನಿಶಾನ ಅವರ ಕುಂಬ್ರ ಸಾರಪುಣಿಯಲ್ಲಿರುವ ತಾಯಿ ಮನೆಗೆ ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ (MYF) ಸದಸ್ಯರ ನಿಯೋಗವು ಗುರುವಾರ ಸಂಜೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿತು.

ನಿಶಾನ ಅವರು ಪತಿ ಮನೆಯವರ ದೌರ್ಜನ್ಯದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದೊಂದಿಗೆ ಮಾತುಕತೆ ನಡೆಸಿದ ನಿಯೋಗವು ಪ್ರಕರಣದ ಕಾನೂನು ಹೋರಾಟಕ್ಕೆ ಸಂಘಟನೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿತು.
ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪರಿಗಣಿಸಲಾಗಿದ್ದ ಈ ಪ್ರಕರಣವನ್ನು ಸುಳ್ಯ ಪೊಲೀಸರು ತನಿಖೆ ನಡೆಸಿ ಭೇದಿಸಿದ್ದು, ನಿಶಾನ ಅವರ ಮಾವ ಅಲವಿ, ಅತ್ತೆ ಅಯಿಷಾ ಹಾಗೂ ನಾದಿನಿ ಫಸಿಲಾ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
ನಿಯೋಗದಲ್ಲಿ MYF ಸುಳ್ಯ ತಾಲೂಕು ಅಧ್ಯಕ್ಷ ಕೆ.ಎಸ್. ಉಮ್ಮರ್, ರಶೀದ್ ಜಟ್ಟಿಪಳ್ಳ, ನಝೀರ್ ಶಾಂತಿನಗರ, ಲತೀಫ್ ಹಾಗೂ ಸುಬೈರ್ ಉಪಸ್ಥಿತರಿದ್ದರು. ಮೃತ ಫಾತಿಮತ್ ನಿಶಾನ ಅವರ ತಾಯಿ ಸುಬೈದಾ ಮೂಲತಃ ಸುಳ್ಯದವರಾಗಿದ್ದು, ಅವರು ಅಜ್ಜಾವರ ನಿವಾಸಿ ಹಸೈನಾರ್ ಅವರ ಪುತ್ರಿಯಾಗಿದ್ದಾರೆ
m