ಇತರೆ, ಸ್ಥಳೀಯ

ಸುಳ್ಯ SIR-2026 ಪ್ರಗತಿ ಪರಿಶೀಲನಾ ಸಭೆ : ಡಿಜಿಟೈಸೇಶನ್ 94.32% ಪೂರ್ಣ; 6,011 ಮತದಾರರು ಶಾಶ್ವತ ಸ್ಥಳಾಂತರ, 4,233 ಮಂದಿ ಮೃತರೆಂದು ದಾಖಲೆ

30 ಸಾವಿರಕ್ಕೂ ಹೆಚ್ಚು ಅಸಂಗತ (Anomalies) ಫಾರ್ಮ್‌ಗಳು ಗುರುತು

ಸುಳ್ಯ, ಆಗಸ್ಟ್, 04: ಸುಳ್ಯ ಮತ್ತು ಕಡಬ ತಾಲ್ಲೂಕುಗಳಿಗೆ ಸಂಬಂಧಿಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (Special Intensive Revision–SIR) ಪ್ರಗತಿ ಪರಿಶೀಲನಾ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸುಳ್ಯ ತಹಶೀಲ್ದಾರ್ ಮಂಜುಳ ಎಂ. ಕಡಬ ತಹಶೀಲ್ದಾರ್ ಗಣೇಶ್ ಅವರ ಉಪಸ್ಥಿತಿಯಲ್ಲಿ ಆಗಸ್ಟ್, 04ರಂದು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮಿ ಅವರು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಒಗಳು (BLO) ಹಾಗೂ ಚುನಾವಣಾ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದಲೂ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ಆಗಸ್ಟ್ 4, 2026ರಂದು ಸಂಜೆ 6.00 ಗಂಟೆಯವರೆಗೆ ಲಭ್ಯವಿರುವ ಮಾಹಿತಿಯಂತೆ, ಕ್ಷೇತ್ರದ ಒಟ್ಟು 2,08,487 ಮತದಾರರಲ್ಲಿ ಎಲ್ಲರಿಗೂ Enumeration Form ವಿತರಣೆ ಪೂರ್ಣಗೊಂಡಿದ್ದು, 100% ಸಾಧನೆ ದಾಖಲಿಸಲಾಗಿದೆ.
ಈವರೆಗೆ 1,96,645 Enumeration Formಗಳನ್ನು ಡಿಜಿಟೈಸೇಶನ್ ಮಾಡಲಾಗಿದ್ದು, ಇದು 94.32% ಪ್ರಗತಿಯನ್ನು ಸೂಚಿಸುತ್ತದೆ.

ಇದಲ್ಲದೆ,
ASDD ಎಂದು ಗುರುತಿಸಲಾದ ಮತದಾರರು – 11,842 (5.68%)

ಪತ್ತೆಯಾಗದ/ಗೈರು (Untraceable/Absent) – 391 (0.19%)

ಶಾಶ್ವತವಾಗಿ ಸ್ಥಳಾಂತರಗೊಂಡವರು (Permanently Shifted) – 6,011 (2.88%)

ಮೃತರು (Death) – 4,233 (2.03%)
ಈಗಾಗಲೇ ನೋಂದಾಯಿತರಾಗಿರುವವರು (Already Enrolled) – 1,182 (0.57%)

ಇತರೆ (Others) – 25 (0.01%)

30 ಸಾವಿರ ಕ್ಕಿಂತ ಮೇಲು ಅಸಂಗತ (Anomalies) ಫಾರ್ಮ್‌ಗಳ ಗುರುತು

ಡಿಜಿಟೈಸೇಶನ್ ಪ್ರಕ್ರಿಯೆಯಲ್ಲಿ ಇದುವರೆಗೆ ಸುಮಾರು 30 ಸಾವಿರ ಕ್ಕಿಂತ ಮಿಕ್ಕಿ ಅಸಂಗತ (Anomalies) ಫಾರ್ಮ್‌ಗಳನ್ನು ಗುರುತಿಸಲಾಗಿದ್ದು, ಅವುಗಳ ಪರಿಶೀಲನೆ ಮುಂದಿನ ಹಂತದಲ್ಲಿ ನಡೆಯಲಿದೆ.

ಅಸಂಗತ (Anomalies) ಫಾರ್ಮ್‌ಗಳು ಎಂದರೇನು?

2002ರಲ್ಲಿ ನೀಡಲಾದ ಮತದಾರರ ಗುರುತಿನ ಚೀಟಿ ಹಾಗೂ ಪ್ರಸ್ತುತ ಇರುವ ಮತದಾರರ ಗುರುತಿನ ಚೀಟಿಯಲ್ಲಿನ ಸ್ಪೆಲಿಂಗ್, ಇನಿಷಿಯಲ್, ಸರ್‌ನೇಮ್ (ಕುಲಹೆಸರು) ಸೇರಿದಂತೆ ವೈಯಕ್ತಿಕ ವಿವರಗಳಲ್ಲಿ ಸಾಮಾನ್ಯ ವ್ಯತ್ಯಾಸಗಳು ಕಂಡುಬಕಂಡುಬರುತ್ತವೆ, ಅಂತಹ ದಾಖಲೆಗಳನ್ನು ಮರುಪರಿಶೀಲನೆಗಾಗಿ “ಅಸಂಗತ (Anomalies) ಫಾರ್ಮ್‌ಗಳು” ಎಂದು ಗುರುತಿಸಲಾಗುತ್ತದೆ. ಇದು ಮತದಾರರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲ; ದಾಖಲೆಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳುವ ಪರಿಶೀಲನಾ ಹಂತವಾಗಿದೆ. ಎಂದು ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮಿ ಸಭೆಗೆ ತಿಳಿಸಿದರು
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಧಾಕೃಷ್ಣ ಬೊಳ್ಳೂರು, ಅಭಿಲಾಷ್ ಕಡಬ, ಸತೀಶ್ ನ್ಯಾಕ್, ಶಶೀಧರ್ ಮಾಸ್ಟರ್, ಭಾರತೀಯ ಜನತಾ ಪಕ್ಷದ ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ಸುಭುದ್ ಮೆನಾಲ್, ಆಮ್ ಆದ್ಮಿ ಪಕ್ಷದ ರಶೀದ್ ಜಟ್ಟಿಪಳ್ಳ, ಶಾಫಿ ಅಡ್ಕ, ಎಸ್ ಡಿ ಪಿ ಐ ಯಿಂದ ಮಿರಾಝ್  ಉಪಸ್ಥಿತರಿದ್ದರು.
ಇದೇ ವೇಳೆ ಸುಳ್ಯ ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ಚಂದ್ರಕಾಂತ್, ಕಡಬ ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ಶಾಹಿದುಲ್ಲಾ ಖಾನ್, ತೀರ್ಥೇಶ್ ಪಿ., ಯತೀಶ್ ಕುಮಾರ್ ಬಿ. ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿ  ಉಪಸ್ಥಿತರಿದ್ದರು.
m

ಅಸಂಗತ (Anomalies) ಫಾರ್ಮ್‌ಗಳುಅಸಂಗತಅಸಂಗomalies)ರ್ಮ್‌ಗಳು ದರೇನು? (Anomalies) ಫರ್ಮ್‌ಗಳು ಎಂದರೇನು?