ಅಗಸ್ಟ್ 15. ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ನಿರ್ದೇಶಕರಾದ ಜಾನಿ.ಕೆ.ಪಿ ನೆರವೇರಿಸಿದರು. ಈ ಸಂದರ್ಭದಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನದ ಸಂದೇಶ ನೀಡಿ ಮಾತನಾಡಿದ ಜಾನಿ.ಕೆ.ಪಿಯವರು.ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಬ್ರಿಟೀಷರ ಲಾಠಿ,ತುಪಾಕಿ ಯಾವ ಆಯುಧಗಳನ್ನು ಲೆಕ್ಕಿಸದೆ ಹೋರಾಡಿದ ಅವರುಗಳ ಹೃದಯದಲ್ಲಿ ಇದ್ದದ್ದು ತಾವಿಲ್ಲದ ನಾಳೆಗಳಲ್ಲಿ ಈ ಸಮಾಜದಲ್ಲಿ ಬಾಳಿ ಬದುಕಬೇಕಾದ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯದ ಕನಸು ಮಾತ್ರವಾಗಿತ್ತು.

ಅವರಿಗೆ ಗೌರವ ಅರ್ಪಿಸುವುದು ಕೂಡಾ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಉದ್ದೇಶಗಳಲ್ಲಿ ಒಂದು ಸ್ವಾತಂತ್ರ್ಯ ಎನ್ನುವುದು ಒಂದು ಅನುಭವ ಅದು ಕೇವಲ ಬ್ರಿಟೀಷರ ಆಢಳಿತದಿಂದ ಭಾರತೀಯರ ಆಡಳಿತಕ್ಕೆ ಬದಲಾಗುವುದು ಮಾತ್ರವಲ್ಲ ,ಆರ್ಥಿಕವಾಗಿ ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ತನ್ನ ಬದುಕಿನ ಎಲ್ಲಾ ಸಂದರ್ಭಗಳಲ್ಲಿ ಆತ್ಮಾಭಿಮಾನದ ಅನುಭವ ಉಂಟಾಗುವುದು ಕೂಡ





m
