ಸುಳ್ಯ: ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಅನ್ಸಾರಿಯಾ ಎಜುಕೇಶನ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಲತೀಫ್ ಹರ್ಲಡ್ಕ ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಂಚಾಲಕ ಹಾಗೂ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಯೋಜಕ ಶಾಫಿ ಕುತ್ತಾಮೊಟ್ಟೆ, ನಿಕಟಪೂರ್ವ ಸಂಚಾಲಕ ಹಾಜಿ ಎಸ್.ಎಂ. ಅಬ್ದುಲ್ ಹಮೀದ್, ರಕ್ಷಕ-ಶಿಕ್ಷಕ ಸಂಘದ ಎಸ್.ಪಿ. ಅಬೂಬಕ್ಕರ್, ಎನ್.ಎ. ಅಬ್ದುಲ್ಲ, ಮಾಜಿ ಸಂಚಾಲಕ ಕೆ.ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ಸ್ವಾಗತಿಸಿದರು. ಶಿಕ್ಷಕ ರಂಜಿತ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮಗಳು ಜರುಗಿದವು.





m
