ಇತರೆ

ತೆಕ್ಕಿಲ್ ಗೆ ಎಕ್ಸ್‌ಪರ್ಟೈಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್. ಶೇಖ್ ಕರ್ನಿರೆ ಭೇಟಿ

ಟಿ.ಎಂ ಶಾಹಿದ್ ತೆಕ್ಕಿಲ್’ರವರ  ಶಿಕ್ಷಣ, ಸಮಾಜ ,ಧಾರ್ಮಿಕ ರಾಜಕೀಯ ಸೇವೆಗೆ ಶ್ಲಾಘನೆ

ಸುಳ್ಯ ತೆಕ್ಕಿಲ್ : ಸೌದಿ ಅರೇಬಿಯಾದ ಪ್ರತಿಷ್ಠಿತ ಎಕ್ಸ್‌ಪರ್ಟೈಸ್ (Expertise) ಕಂಪನಿಯ ಉಪಾಧ್ಯಕ್ಷರಾದ ಕೆ.ಎಸ್. ಶೇಖ್ ಕರ್ನಿರೆ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಇದರ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಕೆ.ಎಸ್. ಶೇಖ್ ಕರ್ನಿರೆ ಅವರನ್ನು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಗಣ್ಯರು, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಮತ್ತು ಸಮಾಜ ಸೇವೆಯಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ನಿರಂತರ ಬದ್ಧತೆ ಹಾಗೂ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂಧರ್ಭದಲ್ಲಿ ಉದ್ಯಮಿ ಸಲೀಂ ಪೆರುಂಗೋಡಿ, ನ.ಪಂ ನಾಮ‌ ನಿರ್ದೇಶಿತ ಸದಸ್ಯ ಸಿದ್ಧೀಕ್ ಕೊಕೊ, ಮಾಜಿ ನ.ಪಂ ಸದಸ್ಯ ಶರೀಫ್ ಕಂಠಿ, ಸಂಪಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಸ್.ಕೆ ಹನೀಫ್, ಕೆ.ಎಂ.ಸಿ.ಸಿ ಸುಳ್ಯ ಜನರಲ್‌ ಸೆಕ್ರೆಟರಿ ತಾಜುದ್ದೀನ್ ಟರ್ಲಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಬ್ದುಲ್ ಜಲೀಲ್ ಅದ್ದು ಅವರನ್ನೂ ಈ ವೇಳೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪೀಸ್ ಸ್ಕೂಲ್ ಸ್ಥಾಪಕಾಧ್ಯಕ್ಷ ಅಬೂಕ್ಕರ್, ಉಪಾಧ್ಯಕ್ಷ ಶಂಸುದ್ದೀನ್ ಬೊಳುಬೈಲು, ಸಲಫಿ ಮಸೀದಿ ಕಾರ್ಯದರ್ಶಿ ರಫೀಕ್ ಬಿ.ಎಸ್,  ಅಬ್ದುಲ್ಲಾ ಸುಳ್ಯಕ್ಕಾರ್ಸ್, ಅಬ್ಬಾಸ್, ಉದ್ಯಮಿ ಶಾಫಿ ಬೊಳುಬೈಲು, ಮಜೀದ್ ಮುಂತಾದವರು ಉಪಸ್ಥಿತರಿದ್ದರು.
m