Featured, ಇತರೆ, ಸ್ಥಳೀಯ

ಗಾಂಧಿನಗರ ಮಿಸ್ಬಾಹುಸ್ಸುನ್ನ ದರ್ಸ್ ವಿದ್ಯಾರ್ಥಿಗಳ ಈದ್ ಮಿಲಾದ್ ಫೆಸ್ಟ್‌ಗೆ ಚಾಲನೆ

ಸುಳ್ಯ: ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ಮಿಸ್ಬಾಹುಸ್ಸುನ್ನ ದರ್ಸ್‌ನ ವಿದ್ಯಾರ್ಥಿಗಳ ಈದ್ ಮಿಲಾದ್ ಫೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಮಾಅತ್ ಅಧ್ಯಕ್ಷ ಹಾಜಿ ಕೆ.ಎಂ.ಎಸ್. ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಶುಭ ಹಾರೈಸಿದರು. ಮಸ್ಜಿದ್ ಖತೀಬರಾದ ಅಲ್‌ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುದರ್ರಿಸ್ ಬಹು. ಮುಬಶಿರ್ ಅಹ್ಸನಿ ಪ್ರಾಸ್ತಾವಿಕ ಭಾಷಣ ನೆರವೇರಿಸಿದರು ಸದರ್ ಉಸ್ತಾದ್ ಬಹು. ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳಾದ ಹಮೀದ್ ಬೀಜಕೊಚ್ಚಿ, ಹಾಜಿ ಎಸ್.ಎಂ. ಹಮೀದ್, ಹಾಜಿ ಐ. ಇಸ್ಮಾಯಿಲ್, ಅಬೂಬಕ್ಕರ್ ಸಿದ್ದೀಕ್ ಕೊಡಿಯಮ್ಮೆ, ಹಾಜಿ ಅಬ್ದುಲ್ ಗಫ್ಫಾರ್, ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಸಿದ್ದೀಕ್ ಕಟ್ಟೆಕಾರ್ಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

m