ಸೋಣಂಗೇರಿ: ಶ್ರೀಕೃಷ್ಣ ಭಜನಾ ಮಂದಿರ, ಸೋಣಂಗೇರಿ ಇದರ ವತಿಯಿಂದ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಾಜಿ ಸಚಿವರಾದ ಎಸ್. ಅಂಗಾರ ಅವರು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಬಿಡುಗಡೆಗೊಳಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಬಳಿಕ ಎಸ್. ಅಂಗಾರ ಅವರು ಮಂದಿರದ ಕಾಮಗಾರಿಯನ್ನು ವೀಕ್ಷಿಸಿ, ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಿಯರಾದ ರವೀಂದ್ರನಾಥ ನಡುಮನೆ, ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ (ರಿ.) ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಖಜಾಂಚಿ ಲೀಲಾವತಿ ನಡುಮನೆ, ಸಂಚಾಲಕ ಸತ್ಯಶಾಂತ್ಯಾಗಮೂರ್ತಿ, ಸದಸ್ಯರಾದ ಸುಪ್ರೀತ್ ಮೋಂಟಡ್ಕ, ಶುಭಾ ಕಾಡುತೋಟ, ಕೇಶವ ಕುಕ್ಕಾಜೆಕ್ಕಾನ, ಮೋಹಿನಿ ನಡುಮನೆ, ಪ್ರಿಯಾಂಕಾ ನಡುಮನೆ, ಹೇಮಂತ್ ಕುಂಟಿಕ್ಕಾನ, ಲೋಕೇಶ ಸುತ್ತುಕೋಟೆ ಸೇರಿದಂತೆ ಹರೀಶ್, ಮುರಳಿ, ವಿಜೇತ್ ಅಡ್ಯಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.





m

